ಚಾಮರಾಜನಗರ : ಅರಕಲವಾಡಿ ಗ್ರಾಮದ ಹೊರವಲಯದ ಶಾಂತಕುಮಾರ್ ಎಂಬವರ ಕ್ವಾರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಬಿ.ಟಿ ಅವರ ನಿರ್ದೇಶನದ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸ್ ಠಾಣೆ ರಿಹಾನ ಬೇಗಂ ಮತ್ತು ಸಿಬ್ಬಂದಿ ಕಲ್ಲು ಬಂಡೆಗಳ ನಡುವೆ ಪ್ಲಾಸ್ಟಿಕ್ ಚೀಲದಲ್ಲಿ ಅಡಗಿಸಿಟ್ಟಿದ್ದ 53 ಜಲೆಸ್ಟಿಕ್ ಗಳು, 20 ಇ ಡಿ ಯನ್ನ ವಶಪಡಿಸಿಕೊಂಡಿದ್ದಾರೆ, ಕ್ವಾರಿಯಲ್ಲಿದ್ದ ಆಕಾಶ್, ಮ್ಯಾನೇಜರ್ ಚಂದ್ರಶೇಖರ್, ಎಂಬವರನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.