ಚಾಮರಾಜನಗರ : ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ 28,800/- ರೂ. ಮೌಲ್ಯದ 51.840 ಲೀಟರ್ ಮದ್ಯವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ನಿರ್ದೇಶನದ  ಮೇರೆಗೆ ಮ.ಮ.ಬೆಟ್ಟ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್.ಪಿ ಖಚಿತ  ಮಾಹಿತಿ ಮೇರೆಗೆ ಸಿಬ್ಬಂದಿಗಳೊಡನೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ಹುಲಿಗೂಡು ತಂಬಡಿಗೇರಿ ಕಚ್ಚಾ ರಸ್ತೆಯ ಬಳಿ ಎ.ಜೇಮ್ಸ್ ಬಿನ್ ಲೇಟ್ ಅರ್ಪುದಸ್ವಾಮಿ,

ವಡ್ಡರದೊಡ್ಡಿ ಗ್ರಾಮ, ಹನೂರು ತಾಲ್ಲೂಕು ಎಂಬುವವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ರೂ.28,800/- ಮೌಲ್ಯದ 576 ಮದ್ಯದ ಪೌಚ್‌ಗಳನ್ನು (51.840 ಲೀಟರ್) ತಗೆದುಕೊಂಡು ಹೋಗುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಸದರಿ ಆಸಾಮಿ ಹಾಗೂ ಇತರೆ 5 ಜನರ ಮೇಲೆ ಮ.ಮ.ಬೆಟ್ಟ ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.