ಗುಂಡ್ಲುಪೇಟೆ: ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ಎಣ್ಣೆ ವಸೂಲಿ ಮಾಡಿ ಸರ್ಕಾರಿ ವಾಹನದಲ್ಲೇ ಬೇರೆಡೆ ಶಿಫ್ಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಟ್ಟಣದ ಲಕ್ಷ್ಮಿ ವೈನ್ಸ್ ಸೇರಿದಂತೆ ಹಲವು ಬಾರ್ ಗಳಲ್ಲಿ ವಸೂಲಿ ಮಾಡಿ ಬೇರೆಡೆ ಸಾಗಿಸಿದ್ದಾರೆ ಅಂತ ಪುರಸಭೆ ಸದಸ್ಯ ರಾಜ್ ಗೋಪಾಲ್ ಗಂಭೀರ ಆರೋಪ ಮಾಡಿದ್ದಾರೆ.
ಅಬಕಾರಿ ನಿರೀಕ್ಷಕರ ವಿರುದ್ಧ ನೇರ ಆರೋಪ ಮಾಡಿರುವ ಪುರಸಭಾ ಸದಸ್ಯ ರಾಜ್ ಗೋಪಾಲ್ ಸೋಮವಾರ ಸಂಜೆ ಪಟ್ಟಣದ ಹಲವು ಬಾರ್ ಗಳಲ್ಲಿ ಮದ್ಯದ ಬಾಟಲಿಗಳನ್ನ ವಸೂಲಿ ಮಾಡಿ ಬೇರೆಡೆ ಕೊಂಡೊಯ್ದಿದ್ದಾರೆ, ಅಂದ್ಮೇಲೆ ಇವ್ರು ಮದ್ಯ ಮಾರಾಟಗಾರರ ಜೊತೆ ಶ್ಯಾಮಿಲಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಬಾರ್ ಗಳಲ್ಲಿ ನೀರಿನ ಬಾಟಲ್ ಜೊತೆ ಮದ್ಯವನ್ನ ಸಂಗ್ರಹಿಸಿ ಇವ್ರು ಸಾಗಿಸಿದ್ದಾದ್ರು ಎಲ್ಲಿಗೆ ? ಸರ್ಕಾರಿ ವಾಹನದಲ್ಲಿಯೇ ಮದ್ಯ ಸಾಗಾಟ ಮಾಡ್ತಿರೋದನ್ನ ಸಾರ್ವಜನಿಕರು ವಿಡಿಯೋ ಚಿತ್ರೀಕರಿಸಿದ್ದಾರೆ, ಇಂತಹ ಅಧಿಕಾರಿಗಳಿಂದ ಇಲಾಖೆಗೆ ಕಳಂಕ ಎಂದು ಕಿಡಿಕಾರಿದ್ದಾರೆ. ಭ್ರಷ್ಟ ಅಧಿಕಾರಿಗಳ ನಡೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ದುಪ್ಪಟ್ಟು ಹಣಕ್ಕೆ ಅಕ್ರಮವಾಗಿ ಮದ್ಯ ಮಾರಾಟವಾಗ್ತಿರೋದೆ ಸ್ಪಷ್ಟ ನಿದರ್ಶನವಾಗಿದೆ ಆದುದರಿಂದ ಘಟನಾ ಸಂಬಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

