ಚಾಮರಾಜನಗರ : ವಿವಾಹ ಕಾರ್ಯಕ್ರಮದ ವೇಳೆ ವರ ಕುಸಿದು ಬಿದ್ದ ಘಟನೆ ಹನೂರು ತಾಲ್ಲಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಸುಮಾರು 93 ಜೋಡಿಗಳಿಗೆ ಇಂದು ಸಾಮೂಹಿಕ ವಿವಾಹವಾಯಿತು. ಸಾಲೂರು ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ ಸಮ್ಮುಖದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದಿಂದ ಕಾರ್ಯಕ್ರಮ ನಡೆಯಿತು.
ಸಾಮೂಹಿಕ ವಿವಾಹ ಮುಗಿದು, ವೇದಿಕೆ ಕಾರ್ಯಕ್ರಮ ನಡೆಯುವಾಗ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ರಘು ಕುಸಿಸು ಬಿದ್ದ ವರ. ವರ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಘಟನೆಯಿಂದ ಜನ ಆತಂಕಗೊಂಡರು. ಮದುವೆಯಾದ ಕೆಲವೇ ಕ್ಷಣದಲ್ಲಿ ನವ ವರ ರಘು ಕುಸಿದು ಬಿದ್ದಿದ್ದಾನೆ. ತಕ್ಷಣ ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

