ಚಾಮರಾಜನಗರ : ಗ್ರಾಮೀಣ ಭಾಗದ ಜನರ ಮೂಲಭೂತ ಸೌಕರ್ಯಗಳಿಗೆ ಗ್ರಾಮ ಪಂಚಾಯ್ತಿ ಸ್ಪಂದಿಸದೇ ಇರುವುದನ್ನು ಗಮನಿಸಿದ ಗ್ರಾಮದವರು  ಪಂಚಾಯ್ತಿ ಕಛೇರಿಯ ಬಾಗಿಲಿನ ಮುಂದೆ ಮುಳ್ಳಿನ ಗಿಡ ಹಾಕಿ ವಿನೂತವಾಗಿ ಪ್ರತಿಭಟನೆ ನಡೆಸಿದ ಘಟನೆ  ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೇಯ ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯ್ತಿ ಪರಿಮಿತಿಯೊಳಗೆ ಒಳಚರಂಡಿ ವ್ಯವಸ್ಥೆ ಇಲ್ಲೆ ತ್ಯಾಜ್ಯ ನೀರುಗಳು ರಸ್ತೆಯಲ್ಲಿ ಹರಿದು ರೋಗಗಳು ಬರುವ ಲಕ್ಷಣಗಳಿವೆ ಹಾಗೂ ಸಾರ್ವಜನಿಕರು ತಿರುಗಾಡುವ ರಸ್ತೆಗಳಲ್ಲಿ ಗುಂಡಿಗಳೇ ಅಧಿಕವಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ.

ಈ ಬಗ್ಗೆ ಹಲವಾರು ಭಾರಿ ಗ್ರಾಮ ಪಂಚಾಯ್ತಿಗೆ ರಸ್ತೆ ಹಾಗೂ ಚರಂಡಿ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದೇ ಇರುವ ಹಿನ್ನಲೆಯಲ್ಲಿ ಬೇಸತ್ತ ಮನ್ನಾದೆ ಗೌಡ ರವರು ಅಜ್ಜೀಪುರ ಗ್ರಾಮ ಪಂಚಾಯ್ತಿ ಕಛೇರಿಯ ಬಾಗಿಲಿಗೆ ಮುಳ್ಳಿನ ಗಿಡವನ್ನು ತಂದು ಹಾಕಿದ್ದರಿಂದ ಬಾಗಿಲು ತೆರೆಯದಂತೆ ಮಾಡಿದ್ದಾರೆ.

ಗ್ರಾಮಸ್ಥರು ಈ ವಿನೂತನ ಪ್ರತಿಭಟನೆಯ ಬೆಳವಣಿಗೆಯಿಂದ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಸದಸ್ಯರು ಮತ್ತು ಪೊಲೀಸರು ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಬರವಸೆ ದೊರೆತ ಬಳಿಕ ಮುಳ್ಳಿನ ಗಿಡವನ್ನು ತೆರವುಗೊಳಿಸಲಾಯಿತು. ಆ ಬಳಿಕ ಎಂದಿನಂತೆ ಕಛೇರಿಯಲ್ಲಿ ಕೆಲಸ ಕಾರ್ಯಗಳು ನಡೆದವು.