ಚಾಮರಾಜನಗರ: ಜಾತಿ ಜನಗಣತಿ ಸಮೀಕ್ಷೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣ ಸ್ವಾಮಿ ಆಗ್ರಹಿಸಿದರು.

ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣ ಸ್ವಾಮಿ(ಪಾಪು) ಮಾತನಾಡಿ, ಪರಿಶಿಷ್ಟ ಜನಾಂಗದ ಒಳ ಮೀಸಲಾತಿಯ ಜಾತಿ ಜನಗಣತಿ ಇನ್ನೂ ಸರಿಯಾಗಿ ನಡೆಯುತ್ತಿಲ್ಲ. ನಮ್ಮ ಸಮುದಾಯದ ಮಂತ್ರಿಗಳಾದ ಡಾ.ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆಯವರು ಈ ಬಗ್ಗೆ ಗಮನ ಹರಿಸದೆ ಕುಳಿತಿದ್ದಾರೆ.

ನಮ್ಮ ಜನರು ನಿಮಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಜಾತಿ ಜನಗಣತಿ ಸಮೀಕ್ಷೆಯಲ್ಲಿ ಬಲಗೈ ಜನಾಂಗದ ಸಮುದಾಯದವರು ಹೊಲಯ ಎಂದು ನಮೂದಿಸಿ ಮುಂದಿನ ತಮ್ಮ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಇಲ್ಲವಾದಲ್ಲಿ ತೊಂದರೆಯಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಲಂಕಶವಾಗಿ ಗಮನಹರಿಸಿ ಉತ್ತಮ ಶಿಕ್ಷಕರನ್ನ ನೇಮಿಸಿ ಜಾತಿ ಜನಗಣತಿಗೆ ಸಹಕರಿಸಬೇಕು.

ಅಲ್ಲದೆ ಜಾತಿ ಜನಗಣತಿಗೆ ಇನ್ನು ಹೆಚ್ಚಿನ ಶಿಕ್ಷಕರನ್ನು ನೇಮಿಸಿ ನಮ್ಮ ಜನಾಂಗದ ಅಭಿವೃದ್ಧಿಗೆ ಸಹಕರಿಸಬೇಕು ಅಲ್ಲದೆ ಸಮೀಕ್ಷೆಗೆ ಬರುವ ಅಧಿಕಾರಿಗಳು ತಪ್ಪಾದ ಮಾಹಿತಿಗಳನ್ನು ನೀಡಿ ನಮ್ಮ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಆದ್ದರಿಂದ ಈ ಬಗ್ಗೆ ಸಮರ್ಪಕವಾದ ಸಮೀಕ್ಷೆ ನಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಹೊಂಗನೂರು ನಟರಾಜು, ಭೋಗಾಪುರ ನಾಗೇಶ್, ಆಟೋ ಉಮೇಶ್, ಗೌರಿಶಂಕರ್, ಮಹದೇವಸ್ವಾಮಿ, ಮಹದೇವಯ್ಯ, ಬಸವಣ್ಣ, ಜಗದೀಶ್, ದೊರೆಸ್ವಾಮಿ, ಮಂಜುನಾಥ್, ಯೋಗೇಶ್, ಅರುಣ್, ಮಹೇಶ್, ಕೃಷ್ಣಮೂರ್ತಿ, ಮಹೇಶ್, ಕುಮಾರ್, ಪ್ರಕಾಶ್, ಚಂದ್ರಶೇಖರ್, ಶಿವಮೂರ್ತಿ, ಸೇರಿದಂತೆ ಇತರರಿದ್ದಾರೆ.