ಚಾಮರಾಜನಗರ: ಹೊತ್ತು ಸಾಗುತ್ತಿದ್ದ ಜೋಳದ ಕಡ್ಡಿ ಮೆದೆಗೆ ಬೆಂಕಿ ಬಿದ್ದರೂ ಟ್ರಾಕ್ಟರ್ ಚಾಲನೆ ಮಾಡುತ್ತಿದ್ದ ಘಟನೆ ಹನೂರು ತಾಲೂಕಿನ ಎಡಹಳ್ಳಿ ದೊಡ್ಡಿ ಸಮೀಪ ನಡೆದಿದೆ.

ಹನೂರಿ‌ನ ಆರ್ ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಚಿಂಚಳ್ಳಿ ಗ್ರಾಮದ ರವಿ ಎಂಬುವರು ಟ್ರಾಕ್ಟರ್ ನಲ್ಲಿ ಆರ್ ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಜೋಳದ ಕಡ್ಡಿಯನ್ನು ತುಂಬಿಕೊಂಡು ಹೋಗುತ್ತಿದ್ದಾಗ ಎಡಹಳ್ಳಿ ದೊಡ್ಡಿ ಗ್ರಾಮದ ಸಮೀಪ ಜೋಳದ ಕಡ್ಡಿಗೆ ಬೆಂಕಿ ಹತ್ತಿಕೊಂಡಿದೆ.

ಆದರೆ ಇದನ್ನು ಗಮನಿಸದೆ ಟ್ರಾಕ್ಟರ್ ಚಾಲನೆ ಮಾಡುತ್ತಿದ್ದನ್ನು ಕಂಡ ಅದೇ ಮಾರ್ಗದಲ್ಲಿ ಬರುತ್ತಿದ್ದ ಹನೂರು ಠಾಣೆ ಇನ್ಸ್ಪೆಕ್ಟರ್ ಆನಂದಮೂರ್ತಿ ಜೋಳದ ಕಟ್ಟಿಗೆ ಬೆಂಕಿ ಹತ್ತಿಕೊಂಡಿರುವ ವಿಚಾರ ತಿಳಿಸಿ ಕೂಲಿ ಕಾರ್ಮಿಕರಾದ ಬಸವಣ್ಣ, ಮಹದೇವಸ್ವಾಮಿ, ಸಿದ್ದಪ್ಪರವರನ್ನು ಕೆಳಗಿಳಿಸಿದ್ದಾರೆ. ಬಳಿಕ ರವಿ ಅವರಿಗೆ ಜೋಳದ ಕಡ್ಡಿಯನ್ನು ಅನ್ ಲೋಡ್ ಮಾಡುವಂತೆ ಹೇಳಿ ಟ್ರ್ಯಾಕ್ಟರ್ ನಿಲ್ಲಿಸಿ ಅನಾಹುತ ತಪ್ಪಿಸಿದ್ದಾರೆ.