ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕೇಂದ್ರ ಸ್ಥಾನದಲ್ಲಿ ಅರಣ್ಯ ಹುತಾತ್ಮರ ದಿನವನ್ನ ಆಚರಣೆ ಮಾಡಲಾಯಿತು. ಈ ವೇಳೆ ಹುತಾತ್ಮ ಸಿಬ್ಬಂದಿಗಳಿಗೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಲಾಯಿತು.
ಬಂಡೀಪುರ ಸ್ವಾಗತ ಕೇಂದ್ರದ ಬಳಿ ನಡೆದ ಕಾರ್ಯಕ್ರಮದಲ್ಲಿ ಜೆಎಂಎಫ್ಸಿ ನ್ಯಾಯಾಲಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಸವರಾಜ್ ಹೆಚ್ ತಳವಾರ್, ಪ್ರದಾನ ಸಿವಿಲ್ ನ್ಯಾಯಾಧೀಶರಾದ ದೀಪು ಎಂ.ಟಿ. ಹೆಚ್ಚುವರಿ ಪ್ರದಾನ ಸಿವಿಲ್ ನ್ಯಾಯಾಧೀಶ ಗಿರೀಶ್ ಆರ್.ಬಿ. ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಪ್ರಭಾಕರನ್ ಹುತಾತ್ಮ ಸಿಬ್ಬಂದಿಗಳ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸಿಎಫ್ ನವೀನ್ ಕುಮಾರ್, ಸುರೇಶ್, ಆರ್ ಎಫ್ ಓ ಮಹದೇವು, ಮಲ್ಲೇಶ್, ಪುನೀತ್ , ನಾಗೇಂದ್ರನಾಯ್ಕ, ನಿಸಾರ್ ಅಹಮದ್, ಸಿಬ್ಬಂದಿಗಳು ಹಾಜರಿದ್ದರು.

