ಚಾಮರಾಜನಗರ: ಹುಲಿ ದಾಳಿಯಿಂದ ಅರಣ್ಯ ಇಲಾಖೆಯ ವಾಚರ್ ಸಾವನ್ನಪ್ಪಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ.
ಹುಲಿ ದಾಳಿಗೆ ಬಲಿಯಾದ ವಾಚರ್ನ್ನು ಸಣ್ಣಹೈದ ಎಂದು ಗುರುತಿಸಲಾಗಿದೆ. ಅವರು ಬಂಡೀಪುರದ ಮರಳಳ್ಳ ಕ್ಯಾಂಪ್ ಸಮೀಪ ಗಸ್ತಿಗೆ ಹೋಗಿದ್ದರು. ಈ ವೇಳೆ ಹುಲಿ ದಾಳಿ ನಡೆಸಿ ಅವರನ್ನು ಕೊಂದು ಹಾಕಿದೆ.

