ಚಾಮರಾಜನಗರ : ಐದು ಹುಲಿ ಆಯ್ತು ಈಗ ಚಿರತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ವಿಸಪ್ರಶನದ ಶಂಕೆ ವ್ಯಕ್ತವಾಗಿದೆ. ಕರು ಮತ್ತು ನಾಯಿ ಮೃತದೇಹಗಳು ಸಹ ಪತ್ತೆಯಾಗಿದೆ. ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದ ಪ್ರಾದೇಶಿಕ ವಲಯದ ಕೊತ್ತಲವಾಡಿ ಬಳಿ ಚಿರತೆಯ ಕಳೇಬರ ಪತ್ತೆಯಾಗಿದೆ.
ಕರಿಕಲ್ಲು ಕ್ವಾರಿಯಲ್ಲಿ ಸುಮಾರು 5 ರಿಂದ ಆರು ವರ್ಷದ ಗಂಡು ಚಿರತೆಯ ಶವ ಪತ್ತೆಯಾಗಿದೆ. ಹಲವು ಅನುಮಾನಗಳಿಗೆ ಕೇಸ್ ಕಾರಣವಾಗಿದೆ. ಮೇಲ್ನೋಟಕ್ಕೆ ಕರುವನ್ನು ಚಿರತೆ ಬೇಟೆಯಾಡಿದ್ದು ಕರುವಿನ ಮೃತದೇಹಕ್ಕೆ ವಿಷಹಾಕಿರುವ ಶಂಕೆ ವ್ಯಕ್ತವಾಗಿದೆ. ಕರು ತಿಂದ ಚಿರತೆ ಹಾಗು ನಾಯಿ ಸಾವನ್ನಪ್ಪಿರಬಹುದು ಎಂಬ ಶಂಕೆ ಇದೆ.
ಚಿರತೆ ಮರಣೋತ್ತರ ಪರೀಕ್ಷೆ ನಡೆಸಿ, ಕರು, ನಾಯಿ, ಚಿರತೆ ಅಂಗಾಂಗ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ವರದಿ ಬಂದ ಬಳಿಕವಷ್ಟೇ ಪ್ರಕರಣದ ನಿಖರ ಮಾಹಿತಿ ಪತ್ತೆಯಾಗಲಿದೆ. ಬಿಆರ್ಟಿ ಡಿಸಿಎಫ್ ಶ್ರೀಪತಿ, ಎಸಿಎಫ್ ಮಂಜುನಾಥ್, ಪ್ರಾದೇಶಿಕ ಅರಣ್ಯ ವಲಯದ ಆರ್ ಎಫ್ ಒ ಸಂದೀಪ್ ಸೇರಿದಂತೆ ಎಲ್ಲರು ಸ್ಥಳಕ್ಕೆ ದೌಡಯಿಸಿದ್ದಾರೆ. ಮಲೈಮಹದೇಶ್ವರ ಬೆಟ್ಟ, ಬಂಡೀಪುರದ ನಂತರ ಇದೀಗ ಚಾಮರಾಜನಗರದ ಹೊರವಲಯದ ಸರದಿಯಾಗಿದೆ.

