ಗುಂಡ್ಲುಪೇಟೆ : ಎರಡು ಹುಲಿಗಳ ನಡುವೆ ನಡೆದ ಕಾದಾಟದಲ್ಲಿ ತೀವ್ರ ಪೆಟ್ಟಿಗೊಳಗಾದ ಗಂಡು ಹುಲಿ ನಿತ್ರಾಣಗೊಂಡು ಬಿದ್ದಿದ್ದ ಘಟನೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ, ಹಾಡಹಗಲೇ ಹುಲಿಗಳ ಕಾಳಗ ಕಂಡು ರೈತರು ಬೆಚ್ಚಿಬಿದ್ದಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಕುಂದಕೆರೆ ವಲಯದ ಮಹದೇವು ಎಂಬ ರೈತರು ಜಮೀನಿನಲ್ಲಿ 11 ಗಂಟೆ ಸಮಯದಲ್ಲಿ ಟ್ರಾಕ್ಟರ್ ನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಹುಲಿಗಳ ಕಾದಾಟ ನೋಡಿ ಭಯಭೀತರಾಗಿ ಜಮೀನಿನಿಂದ ಕಾಲ್ಕಿತ್ತಿದ್ದಾರೆ.
ಸ್ವಲ್ಪ ಸಮಯದ ಬಳಿಕ ಸ್ಥಳಕ್ಕಾಗಮಿಸಿದ ರೈತರು ಬಲಿಷ್ಠ ಹುಲಿಯೊಂದಿಗೆ ಸೆಣಸಲಾಗದೆ ಪೆಟ್ಟಿಗೊಳಗಾಗಿ ನಿತ್ರಾಣಗೊಂಡು ಬಿದ್ದಿದ್ದ ಗಂಡು ಹುಲಿಯನ್ನ ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಬಳಿಕ ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.

