ಗುಂಡ್ಲುಪೇಟೆ : ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವ ರೈತ ಸಂಘ ಪಟ್ಟಣದಲ್ಲಿ ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಸುವ ಮೂಲಕ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರೈತ ಸಂಘ ಹಲವು ಬೇಡಿಕೆಗಳನ್ನ ಸಿದ್ದರಾಮಯ್ಯ ಸರ್ಕಾರದ ಮುಂದಿರಿಸಿ ಸ್ಥಳೀಯ ಶಾಸಕ ಸಚಿವರ ವಿರುದ್ಧ ಅಸಮಧಾನ ಹೊರಹಾಕಿದರು. ಹೊನ್ನೂರು ಪ್ರಕಾಶ್ ಮಾತನಾಡಿ ವನ್ಯಜೀವಿಗಳ ಹಾವಳಿಯಿಂದ ರೈತಾಪಿ ವರ್ಗ ಕಂಗೆಟ್ಟುಹೋಗಿದೆ, ರೈತರ ಹಿತ ಕಾಯಬೇಕಿದ್ದ ಅರಣ್ಯ ಇಲಾಖೆ ದೌರ್ಜನ್ಯ ಎಸಗುತ್ತಿದೆ.
ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ದಾಳಿಯಿಂದ ಜಾನುವಾರುಗಳನ್ನ ಕಳೆದುಕೊಂಡ ರೈತರ ಮೇಲೆಯೇ ಕೇಸ್ ದಾಖಲು ಮಾಡಲಾಗ್ತಿದೆ ಅದರಂತೆ ಅರಣ್ಯಾಧಿಕಾರಿಗಳ ವಿರುದ್ಧ ದೂರು ನೀಡಿದ್ರೆ ಕೇಸ್ ದಾಖಲು ಮಾಡಲು ಪೊಲೀಸ್ ಇಲಾಖೆ ಮೀನಾಮೇಷ ಎಣಿಸುತ್ತದೆ ಹಾಗಾದ್ರೆ ರೈತರಿಗೆ ನ್ಯಾಯ ಸಿಗೋದಾದ್ರು ಹೇಗೆ ಎಂದು ಪ್ರಶ್ನಿಸಿದರು.
ಚುನಾಯಿತ ಜನಪ್ರತಿನಿಧಿಗಳು ಜನರ ಸಮಸ್ಯೆಯನ್ನ ಬಗೆಹರಿಸಲು ಪಕ್ಷಾತೀತವಾಗಿ ಕೆಲ್ಸ ಮಾಡ್ಬೇಕು , ನಿಮ್ಮನ್ನ ಆಯ್ಕೆ ಮಾಡಿರುವ ಮತದಾರ ಪ್ರಭುಗಳಿಗೆ ಪ್ರಶ್ನಿಸುವ ಹಕ್ಕಿದೆ, ಜನರಿಂದ ಆಯ್ಕೆಯಾಗಿ ಬಂದ ನೀವ್ಗಳು ಪ್ರಾಮಾಣಿಕವಾಗಿ ಕೆಲಸ ಮಾಡ್ಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತದಾರರೆ ಪೊರಕೆ ಸೇವೆ ಮಾಡ್ತಾರೆ ಅಂತ ಎಚ್ಚರಿಕೆ ನೀಡಿದರು.

