ಗುಂಡ್ಲುಪೇಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಗುರುಮಲ್ಲೇಶ್ವರ ಶಾಖಾ ಮಠದಲ್ಲಿ ವಾಸ್ತವ್ಯ ಹೂಡಿದ್ದ ಫೇಕ್ ನಿಜಲಿಂಗ ಸ್ವಾಮಿ ಅಲಿಯಾಸ್ ಮಹಮದ್ ನಿಸಾರ್ ಎಂಬವನ ಸಲಿಂಗ ಕಾಮಪುರಾಣ ಬಯಲಾಗಿ ಹೋಗಿದೆ. ಮದ್ಯಪಾನ, ಮಾಂಸಾಹಾರ ಜೊತೆಗೆ ಯುವಕನ ಜೊತೆ ಅಶ್ಲೀಲವಾಗಿ ವರ್ತಿಸುತ್ತಿರುವ ದೃಶ್ಯ ವೈರಲ್ಲಾಗಿದೆ.

ಲಿಂಗದೀಕ್ಷೆ ಪಡೆದಿದ್ದೇನೆ ಎಂದು ಹೇಳಿ ಮಠದ ಗದ್ದುಗೆ ಏರಲು ಬಂದಂತಹ ಮುಸ್ಲಿಂ ವ್ಯಕ್ತಿಯೊಬ್ಬನ ಸಲಿಂಗ ಕಾಮದಾಟ ಬಹಿರಂಗವಾಗಿ ದೆ, ಯಾದಗಿರಿ ಜಿಲ್ಲೆಯ ಮಹಮ್ಮದ್ ನಿಸಾರ್ ತನ್ನ ಧರ್ಮವನ್ನ ಗೌಪ್ಯವಾಗಿರಿಸಿ ಚೌಡಹಳ್ಳಿ ಗ್ರಾಮದ ಜನರನ್ನ ವಂಚಿಸಿ ಗುರುಮಲ್ಲೇಶ್ವರ ಶಾಖಾ ಮಠದ ಮಠಾದೀಶನಾಗಿದ್ದ. ಇದಾದ ಬಳಿಕ ಮಠದಲ್ಲಿದ್ದ ಓರ್ವರಿಗೆ ತನ್ನ ಮೊಬೈಲ್ ನೀಡಿದ್ದ ವೇಳೆ ಆತನ ಪೂರ್ವಾಪರ ಸತ್ಯ ಹೊರಬಿದ್ದಿತ್ತು.

ಮುಸ್ಲಿಂ ವ್ಯಕ್ತಿ ವಂಚನೆ ಕುರಿತಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಗ್ರಾಮಸ್ಥರು ಆತನನ್ನ ಗುರು ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಫೇಕ್ ನಿಜಲಿಂಗ ಊರು ಬಿಟ್ಟಿದ್ದ , ಫೇಕ್ ಸ್ವಾಮೀಜಿ ಮಠ ತೊರೆದು ತನ್ನೂರಿನತ್ತ ತೆರಳಿದ್ದ ವೇಳೆ ಇತ್ತ ಆತನ ಹೆಸರಲ್ಲಿ ಮುಸ್ಲಿಂ ಟೋಪಿ ಆನ್ ಲೈನ್ ಆರ್ಡರ್ ನಲ್ಲಿ ಮಠಕ್ಕೆ ಬಂದು ತಲುಪಿದೆ. ಇತ್ತ ಮದ್ಯಪಾನ ಮಾಡಿ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಕಂಡು ಗ್ರಾಮಸ್ಥರು ಶಾಕ್ ಆಗಿದ್ದಾರೆ.

ಸದ್ಯಕ್ಕೆ ಪೀಠತ್ಯಾಗ ಮಾಡಿರುವ ಮಹಮ್ಮದ್ ನಿಸಾರ್ ವಿರುದ್ದ ಆಕ್ರೋಶ ವ್ಯಕ್ತವಾಗತೊಡಗಿದ್ದು ದೀಕ್ಷೆ ಪಡೆದು ಮಠದ ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಎಸಗಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.