ಚಾಮರಾಜನಗರ : ಸೊಂಡಿಲಲ್ಲಿ ರಂದ್ರವಾದ ಹಿನ್ನೆಲೆ ನೀರು ಕುಡಿಯಲಾಗದೆ ಆನೆಯೊಂದು ಪರದಾಟ ನಡೆಸುತ್ತಿದ್ದ ದೃಶ್ಯ ಮಲೇ ಮಹದೇಶ್ವರ ಬೆಟ್ಟದ ಪಾಲಾರ್ ರಸ್ತೆಯಲ್ಲಿ ಸೆರೆ ಸಿಕ್ಕಿದ್ದು ಆನೆಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಾಲಾರ್ ರಸ್ತೆಯ ಇಂಡಿ ಬಸಪ್ಪನ ದೇವಸ್ಥಾನದ ಬಳಿ ಈ ಮನಕಲಕುವ ದೃಶ್ಯ ಕಂಡುಬಂದಿದೆ, ಆನೆಯ ಸೊಂಡಿಲಿಗೆ ಪೆಟ್ಟಾಗಿ ರಂದ್ರವಾದ ಕಾರಣ ನೀರು ಕುಡಿಯಲು ಹರಸಾಹಸ ಪಟ್ಟಿದೆ, ಇತ್ತ ಆನೆಯನ್ನ ಕಂಡು ಮಮ್ಮಲ ಮರುಗಿದ ಸ್ಥಳೀಯರು ಚಿತ್ರೀಕರಿಸಿ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

