ಚಾಮರಾಜನಗರ: ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಪಪ್ರಚಾರ ವಿರುದ್ದ ಸಿಡಿದೆದ್ದ ಭಕ್ತರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರಿ ದೇವಾಲಯದಿಂದ ಪ್ಲೆಕಾರ್ಡ್ ಹಿಡಿದು ಡಿಸಿ ಕಚೇರಿವರೆಗೆ ಜನಾಗ್ರಹ ಜಾಥಾ ನಡೆಸುವ ಮೂಲಕ ಷಡ್ಯಂತ್ರ ಮಾಡಿರುವವರ ವಿರುದ್ಧ ಆಕ್ರೋಶ ಹೊರಹಾಕಿದರು.
ಬಂಡಳ್ಳಿ ಮಠದ ಸ್ವಾಮೀಜಿ, ಹಿಂದೂ ಸಂಘಟನೆ ಕಾರ್ಯಕರ್ತರು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು
ಯೂಟ್ಯೂಬರ್ ಗಳು, ಮಹೇಶ್ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು, ಧರ್ಮಸ್ಥಳದ ಅಪಪ್ರಚಾರದ ಹಿಂದೆ ವ್ಯವಸ್ಥಿತ ಜಾಲ ಇದೆಯೆಂದು ಕಿಡಿಕಾರುವ ಮೂಲಕ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು.

