ಗುಂಡ್ಲುಪೇಟೆ : ಧರ್ಮಸ್ಥಳ ಬುರುಡೆ ರಹಸ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮದ್ಯಂತರ ವರದಿಯನ್ನ ಬಿಡುಗಡೆಗೊಳಿಸಬೇಕು ಎಂದು ಮೈಸೂರು ಸಂಸದ ಯದುವೀರ್ ಬೆಂಡರವಾಡಿಯಲ್ಲಿ ಆಗ್ರಹಿಸಿದರು.

ಗುಂಡ್ಲುಪೇಟೆ ತಾಲೂಕಿನ ಬೆಂಡರವಾಡಿ ಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದ್ಯಮದವರ ಜೊತೆ ಮಾತನಾಡಿದ ಅವರು ಧರ್ಮಸ್ಥಳ ಬುರುಡೆ ರಹಸ್ಯದ ಬಗ್ಗೆ ಎಸ್ ಐ ಟಿ ತನಿಖೆ ನಡೆಸಿರುವ ಮಧ್ಯಂತರ ವರದಿಗಾಗಿ ಜನರು ಕಾಯುತ್ತಿದ್ದಾರೆ, ಇದು ರಾಜಕೀಯ ವಿಚಾರವಲ್ಲ, ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದವರ ನಿಜಬಣ್ಣ ಬಯಲು ಮಾಡುವ ಸಕಾಲವಾಗಿದೆ.

ನಾವೆಲ್ಲ ಈಗಾಗಲೇ ಧರ್ಮಸ್ಥಳ ನಿಲುವನ್ನ ವ್ಯಕ್ತಪಡಿಸಿದ್ದೇವೆ, ಶ್ರೀಕ್ಷೇತ್ರದ ಕುರಿತಂತೆ ನಡೆಸಿರುವ ಷ್ಯಡ್ಯಂತ್ರವನ್ನ ಬಯಲು ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ಸಿಗರು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಉದ್ಗಾರ ತೆಗೆಯುತ್ತಿರುವುದು ಸರಿಯಲ್ಲ ವಿಪಕ್ಷ ತನ್ನ ಜವಾಬ್ದಾರಿಯನ್ನ ಅರಿತು ಜನರಪರವಾಗಿ ಒತ್ತಾಯಿಸುತ್ತಿದ್ದೇವೆ ಆದುದರಿಂದ ಕಾಲಹರಣ ಮಾಡುವುದನ್ನ ಬಿಟ್ಟು ಮಧ್ಯಂತರ ವರದಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.