ಚಾಮರಾಜನಗರ : ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ಮೂವರನ್ನು ಅರಣ್ಯ ಇಲಾಖೆ ದಸ್ತಗಿರಿ ಮಾಡಿದ್ದಾರೆ. ವಿಷ ಪ್ರಾಶನ ಮಾಡಿದ್ದ ಹಸುವಿನ ಮಾಲೀಕನೂ ಪತ್ತೆಯಾಗಿದ್ದಾನೆ. ಕೊಪ್ಪ ಗ್ರಾಮದ ಕೂನಪ್ಪ, ಮಾದರಾಜ, ನಾಗರಾಜ ಬಂಧಿತರಾಗಿದ್ದಾರೆಂದು ಅರಣ್ಯ ಇಲಾಖೆ ಅಧಿಕೃತವಾಗಿ ಧೃಡಪಡಿಸಿದೆ. ಇವರ ವಿಚಾರಣೆ ನಡೆಸಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಗಸ್ತ್ ನಲ್ಲಿ ತಾಯಿ ಹುಲಿ ಸೇರಿದಂತೆ ಐದು ಹುಲಿಗಳು ಧಾರಣವಾಗಿ ಸಾವನ್ನಪ್ಪಿದ್ದು, ಇದಕ್ಕೆ ಮಿಷ ಮಿಶ್ರಿತ ಮಾಂಸ ಸೇವೆನೆ ಎಂಬುದು ಖಚಿತವಾಗಿದ್ದು, ಮೃತ ಹುಲಿಗಳ ಬಳಿಯೇ ಹಸುವೊಂದು ಸಾವನ್ನಪ್ಪಿದ್ದು,ಅದರ ಮೇಲೆ ಪೊರೇಟ್ ಕ್ರೀಟನಾಶಕವನ್ನು ಹಾಕಿರುವುದು ಬಯಲಾಗಿದೆ.
ಅರಣ್ಯದೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹಸು ಸಮೀಪದ ಕೊಪ್ಪ ಗ್ರಾಮದ ಕೋನಪ್ಪ , ಹಸುವಿಗೆ ವಿಷ ಪ್ರಷಾಣ ಮಾಡಿಸಿದ ಮಾದರಾಜ ಬಿನ್ ಶಿವಣ್ಣಗೌಡ ಕೊಪ್ಪ ಗ್ರಾಮ, ಹಾಗೂ ನಾಗರಾಜ ಬಿನ್ ಪೂಜಾರಿಗೌಡ ಕಳ್ಗೋಬೆದೊಡ್ಡಿ (ಕೊಪ್ಪ ಗ್ರಾಮ ಸಮೀಪ) ರವರನ್ನು ಪೊಲೀಸರ ಸಹಕಾರದೊಂದಿಗೆ ಬಂಧಿಸಲಾಗಿದೆ.
ಈ ಮೊದಲು ಆರೇಳು ಮಂದಿ ಧನಗಾಹಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಶಿವಣ್ಣಗೌಡ ಹಾಗೂ ಇನ್ನಿತರರು ಶಿವಣ್ಣಗೌಡನ ಮಗ ಮಾದರಾಜ ಬಗ್ಗೆ ಶಂಕೆ ಬರುವಂತೆ ಹೇಳಿಕೆ ಕೊಟ್ಟರು. ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಮನೆಯಲ್ಲಿ ಅಡಗಿ ಕುಳಿತ್ತಿದ್ದ ಶಿವಣ್ಣಗೌಡನ ಮಗ ಮಾದುರಾಜು ಹಾಗೂ ನಾಗರಾಜು ರವರನ್ನು ಬಂಧಿಸಿದ್ದಾರೆ.
ಕಾಡಿನಲ್ಲಿ ಹಸುಗಳು ಮೇವು ಮೇಯಲು ತೆರಳಿವಾಗ ಹುಲಿ ದಾಳಿಯಿಂದ ಹಸುಗಳು ಸಾವನ್ನಪ್ಪುತ್ತಿದ್ವು. ಇದರಿಂದ ಬೇಸತ್ತು ಹುಲಿಗೇ ವಿಷಯಿಟ್ಟು ವಿಕೃತ ಮೆರೆದಿದ್ದಾನೆ ಮಾದರಾಜ . ಅರಣ್ಯಾಧಿಕಾರಿಗಳು ಬಂಧಿತ ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಎನ್ ಟಿ ಸಿ ಎ ಮತ್ತು ತನಿಖಾ ತಂಡದವರಿಂದ ತೀವ್ರತರವಾದ ವಿಚಾರಣೆಗೆ ಒಳಪಡಿಸಲಿದ್ದಾರೆ.

