ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಅರಣ್ಯ ವಲಯದ ರಾಮಾಪುರ ಬೀಟ್ ನ ಹುಣಸೆ ಬೈಲು ಅರಣ್ಯ ಪ್ರದೇಶದಲ್ಲಿ ಮರಿಯಾನೆಯೊಂದರ ಕಳೇಬರ ಪತ್ತೆಯಾಗಿರುವ ಘಟನೆ ನಡೆದಿದೆ.

ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ಆನೆ ಕಳೇಬರ ಕಂಡುಬಂದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಮೃತ ಹೆಣ್ಣಾನೆಮರಿಗೆ 8-10 ವರ್ಷಗಳಾಗಿದ್ದು ಪಶು ವೈದ್ಯ ಡಾ.ಶಿವರಾಜು ಮೃತ ಆನೆಮರಿಯ ಮರಣೋತ್ತರ ಪರೀಕ್ಷೆ ನಡೆಸಿ ಸಹಜ ಸಾವೆಂದು ದೃಢಪಡಿಸಿದ್ದಾರೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮಾರ್ಗಸೂಚಿ ಅನುಸಾರವಾಗಿ ಆನೆ ಕಳೇಬರವನ್ನು ಸುಡಲಾಗಿದೆ ಎಂದು ತಿಳಿದು ಬಂದಿದೆ.