ಚಾಮರಾಜನಗರ: ಮುಖ್ಯ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ ಹಿನ್ನಲೆ ಹೊಮ್ಮ ಸ.ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಒಂದಕ್ಕೆ ಕುಸಿದಿದೆ. ಚಾಮರಾಜನಗರ ತಾಲೋಕಿನ ಹೊಮ್ಮ ಗ್ರಾಮದಲ್ಲಿ ಮಕ್ಕಳ ಟಿಸಿ ಪಡೆದು ಬೇರೆ ಬೇರೆ ಶಾಲೆಗಳಿಗೆ ಪೋಷಕರು ಸೇರಿಸಿದ್ದಾರೆ. ಮುಚ್ಚುವ ಹಂತಕ್ಕೆ ಹೊಮ್ಮ ಸ.ಹಿ.ಪ್ರಾ.ಶಾಲೆ ಬಂದಿದೆ.

ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಮಕ್ಕಳ ಟಿ‌ಸಿ ಪಡೆದು ಬೇರೆಡೆ ಸೇರಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಪ್ರತಿಕ್ರಿಯೆಗೆ ಪೋಷಕರ ನಿರಾಕರಣೆ ವ್ಯಕ್ತವಾಗಿದೆ. ಸದ್ಯ ಶಾಲೆಗೆ ಒಬ್ಬ ವಿದ್ಯಾರ್ಥಿ ಮಾತ್ರ ದಾಖಲು ಮಾಡಲಾಗಿದೆ. 2024-25 ನೇ ಸಾಲಿನಲ್ಲಿ 22 ವಿದ್ಯಾರ್ಥಿಗಳು ಶಾಲೆಯಲ್ಲಿದ್ದರು.

ಈಗಾಗಲೇ ಟಿಸಿ ಪಡೆದ 12 ಮಕ್ಕಳು, ಉಳಿದವರಿಂದಲು ಟಿಸಿ ಪಡೆಯಲು ಅರ್ಜಿ ಹಾಕಲಾಗಿದೆ. ಇಡೀ ಶಾಲೆ ಖಾಲಿ ಖಾಲಿಯಾಗಿದೆ. ವಿದ್ಯಾರ್ಥಿಗಳಿಲ್ಲದೆ ಜ್ಞಾನ ದೇಗುಲ ಬಿಕೋ ಎನ್ನುತ್ತಿದೆ. ಈ ಶಾಲೆಯಲ್ಲೀಗ ಕೇವಲ ಒಬ್ಬ ವಿದ್ಯಾರ್ಥಿ, ಇಬ್ಬರು ಶಿಕ್ಷಕರಿದ್ದಾರೆ. ಹಿಂದೆ‌ ಶಿಕ್ಷಕರು ಸರಿಯಾಗಿ‌ ಪಾಠಪ್ರವಚನ ಮಾಡುತ್ತಿಲ್ಲ ಎಂದು ಪೋಷಕರು ಪ್ರತಿಭಟನೆಯನ್ನೂ ನಡೆಸಿದ್ದರು.