ಚಾಮರಾಜನಗರ: ಸ್ಪೋಟಕ‌ ಸಿಡಿದು ಜಾನುವಾರುಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಜನರು ಹಾಗೂ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ. 5 ಮಂದಿ ಆರೋಪಿಗಳನ್ನ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ನಾರಾಯಣಸ್ವಾಮಿ, ಶಿವಣ್ಣ ಹನೂರು ತಾಲೂಕಿನ ಚಿಕ್ಕಲತ್ತೂರು ಗ್ರಾಮದ ಜಡೆಯಪ್ಪ,ಈತನ ಮಗ ರುದ್ರ, ಭದ್ರಯ್ಯನಹಳ್ಳಿ ಗ್ರಾಮದ ಶ್ರೀರಂಗಶೆಟ್ಟಿ ಬಂಧಿತರು ಎಂದು ಗುರುತಿಸಲಾಗಿದೆ.

ಬಂಧಿತ ನಾರಾಯಣಸ್ವಾಮಿಯಿಂದ 43 ಜೀವಂತ ನಾಡ ಗುಂಡುಗಳು ವಶ ಪಡಿಸಿಕೊಳ್ಳಲಾಗಿದೆ. ಕಳೆದ ಒಂದು ವಾರದಿಂದ ಹಸುಗಳು ಮೇವು ಮೇಯುವಾಗ ಸಿಡಿಮದ್ದು ಸ್ಟೋಟಗೊಂಡಿದೆ. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.