ಚಾಮರಾಜನಗರ: ಕಾರು ಹಾಗೂ ಮಲೇಮಹದೇಶ್ವರ ಪ್ರಾಧಿಕಾರದ ಬಸ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಕಾರು ಚಾಲಕ ಮೃತಪಟ್ಟಿದ್ದು, ಇಬ್ಬರಿಗೆ ತೀವ್ರ ಪೆಟ್ಟಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಸಮೀಪ ನಡೆದಿದೆ.

ಮಹದೇಶ್ವರ ಬೆಟ್ಟದಿಂದ ಬೆಂಗಳೂರಿನತ್ತ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದಂತಹ ತಮಿಳುನಾಡು ಮೂಲದ ಕಾರಿನ ಚಾಲಕ ವಿಜ್ಞೇಷ್ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಹಾಗೂ ಬಸ್ ಚಾಲಕ ರಮೇಶ್ ಹಾಗೂ ಪ್ರಯಾಣಿಕ ಪಾಳ್ಯ ಗ್ರಾಮದ ಜಯರಾಮ್ ಎಂಬಾತ ಗಾಯಗೊಂಡು ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಸ್ಥಳೀಯರು ಆಂಬುಲೇನ್ಸ್ ಮುಖಾಂತರ ನೊಂದ ವ್ಯಕ್ತಿಗಳನ್ನು ಕೊಳ್ಳೇಗಾಲ ಆಸ್ಪತ್ರೆಗೆ ರವಾನಿಸಿದ್ದಾರೆ. ಹಾಗೆಯೆ ಕೊಳ್ಳೆಗಾಲ ಗ್ರಾಮಾಂತರ ಠಾಣೆಯ ಪೊಲೀಸರು ಮೃತ ದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

