ಗುಂಡ್ಲುಪೇಟೆ : ಮೈಸೂರು ದಸರಾ ಸಂಭ್ರಮ ನೋಡಲು ಕುಟುಂಬ ಸಮೇತರಾಗಿ ತೆರಳಿದ್ದ ಗುಂಡ್ಲುಪೇಟೆ ಪಟ್ಟಣದ ಉದ್ಯಮಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಹಣ ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ಗುಂಡ್ಲುಪೇಟೆ ಪಟ್ಟಣದ ಉದ್ಯಮಿ ಉಮೇಶ್ ಎಂಬವರು ದಸರಾ ನೋಡಲು ಮೈಸೂರಿಗೆ ತೆರಳಿದ್ದ ವೇಳೆ ರಾತ್ರಿ ವೇಳೆ ಬಾಗಿಲು ಮೀಟಿ  ಮನೆ ಹೊಕ್ಕ ಕಳ್ಳರು 300 ಗ್ರಾಂ ಚಿನ್ನಾಭರಣ, 20 ಲಕ್ಷಕ್ಕೂ ಹೆಚ್ಚು ನಗದು ಹಣವನ್ನ  ಹೊತ್ತೊಯ್ದಿದ್ದಾರೆ.

ದಸರಾ ದೀಪಾಲಂಕಾರ ನೋಡಿ ವಾಪಾಸ್ ಮನೆಗೆ ಬಂದ ವೇಳೆ ಉದ್ಯಮಿ ಉಮೇಶ್ ಗೆ ಅಚ್ಚರಿ ಕಾದಿತ್ತು, ಮನೆ ಬಾಗಿಲು ಮೀಟಿ ಒಳಹೊಕ್ಕಿದ್ದ ಖದೀಮರು ಕೈ ಚಳಕ ತೋರಿಸಿ ಪರಾರಿಯಾಗಿದ್ದಾರೆ.

ಸದ್ಯ ಘಟನಾ ಸಂಬಂದ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಘಟನಾ ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.