ಚಾಮರಾಜನಗರ: ಹೂತಿಟ್ಟ ಮಹಿಳೆಯ ಶವ ಪತ್ತೆಯಾಗಿದ್ದು, ಭೂಮಿಯಿಂದ ಮುಂಗೈ ಮೇಲೆ ಬಂದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ನಡೆದಿದೆ.
ಶವದ ಕೈ ಮೇಲೆ ಬಂದಿರುವುದನ್ನು ಕಂಡು ಗ್ರಾಮಸ್ಥರು ಹೌಹಾರಿದ್ದಾರೆ. ಶವ ಹೂತಿದ್ದ ಅಕ್ಕಪಕ್ಕ ಅರಿಶಿಣ, ಕುಂಕುಮ ಚೆಲ್ಲಿರುವುದು ಪತ್ತೆಯಾಗಿದೆ. ಶವವನ್ನು ಹೊರ ತೆಗೆದು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುಮಾರು 35 ವರ್ಷದ ಮಹಿಳೆ ಎಂದು ಅಂದಾಜಿಸಲಾಗಿದೆ.

ಕೊಲೆಯೋ ಅಥವಾ ವಾಮಾಚಾರದ ಪ್ರಯೋಗವೋ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಡಾ.ಕವಿತಾ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

