ಗುಂಡ್ಲುಪೇಟೆ : ತಾಲೂಕಿನ ಕಂದೇಗಾಲ ಪಾರ್ವತಿ ಬೆಟ್ಟದ ಸಮೀಪ ಕೋತಿಗಳನ್ನ ವಿಷವಿಕ್ಕಿ ಕೊಂದು ಬೀಸಾಡಲಾಗಿತ್ತು ಮೂಕಪ್ರಾಣಿಗಳನ್ನ ಕೊಂದು ಕೇಕೆ ಹಾಕಿ ಹೋಗಿರುವ ದುರುಳರ ವಿರುದ್ದ ಗಡಿನಾಡ ರಕ್ಷಣಾ ಸೇನೆ ಸಂಘಟನೆ ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ.
ಮಹದೇಶ್ವರ ಬೆಟ್ಟದ ಹುಗ್ಯಾಂ ಸಮೀಪ ಐದು ಹುಲಿಗಳ ಮಾರಣಹೋಮ ಮಾಸುವ ಮುನ್ನವೇ ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ವತಿ ಬೆಟ್ಟದ ರಸ್ತೆ ಬದಿಯಲ್ಲಿ ಚೀಲದಲ್ಲಿ ಕಟ್ಟಿಟ್ಟ ಕೋತಿಗಳ ಶವ ಪತ್ತೆಯಾಗಿದೆ.
ಕೋತಿಗಳಿಗೆ ವಿಷವಿತ್ತು ಹತ್ಯೆಗೈದಿರುವುದನ್ನ ಖಂಡಿಸಿರುವ ಗಡಿನಾಡ ರಕ್ಷಣಾ ಸೇನೆ ಪಧಾಧಿಕಾರಿಗಳು ಕಾರಣಕರ್ತರನ್ನ ಪತ್ತೆಹಚ್ಜಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಎರಡು ಕೋತಿಗಳಿಗೆ ಗುಂಡ್ಲುಪೇಟೆಯ ಪಶು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

