ಚಾಮರಾಜನಗರ : ಕಾವೇರಿ ಹೊರಹರಿವು ಹೆಚ್ಚಾಗುತ್ತಿರುವ ಹಿನ್ನೆಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತವು ಭೋರ್ಗರೆದು ಧುಮ್ಮಿಕ್ಕುತ್ತಿದೆ.‌

‌ಕಾವೇರಿ ಹೊರಹರಿವು 30 ಸಾವಿರ ಕ್ಯೂಸೆಕ್ ಇರುವ ಕಾರಣ ಭರಚುಕ್ಕಿ ಜಲಪಾತವು ಮೈದುಂಬಿ ಧುಮ್ಮಿಕ್ಕುತ್ತಿದ್ದು ಜಲಪಾತದ ಬೆಡಗು ದುಪಟ್ಟಾಗಿದೆ. ತಿಂಗಳ ಹಿಂದೆಯಷ್ಟೇ ನೀರಿಲ್ಲದೆ ಸೊರಗಿದ್ದ ಭರಚುಕ್ಕಿ ಜಲಪಾತ ಈಗ ಮೈದುಂಬಿ ಭೋರ್ಗರೆಯುತ್ತಿದೆ.