ಚಾಮರಾಜನಗರ: ಕೊಳ್ಳೆಗಾಲದಲ್ಲಿ ತಾಲೂಕು ವಕೀಲರ ಸಂಘಕ್ಕೆ ನೂತನವಾಗಿ ಚುನಾವಣೆ ನಡೆದು ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾಗಿ ಬಸವರಾಜು, ಉಪಾಧ್ಯಕ್ಷರಾಗಿ ಸೀಮಾ, ಕಾರ್ಯದರ್ಶಿಯಾಗಿ ಕೆಂಪರಾಜು, ಖಜಾಂಚಿಯಾಗಿ ಅಮೃತ್ ರಾಜ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ವಿನಯ್ ಆಯ್ಕೆಗೊಂಡಿದ್ದಾರೆ.
ಇದೇ ವೇಳೆ ಮಹನಾಯಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ಚಾಮರಾಜನಗರ ವಕೀಲರಾದ ಪ್ರಸನ್ನಕುಮಾರ್.ಬಿ ಮಾತನಾಡ, ವಕೀಲರು ಹಿತಾಶಕ್ತಿಯನ್ನು ಕಾಪಾಡುವ ಕಳಕಳಿ ಹೊಂದಿರಲಿ ಎಂದು ತಿಳಿಸಿದರು.
ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಚಾಮರಾಜನಗರದ ವಕೀಲರಾದ ಪ್ರಸನ್ನ ಕುಮಾರ್.ಬಿ ಮತ್ತು ಕೊಳ್ಳೇಗಾಲದ ವಕೀಲ ಯೋಗೇಶ್ ಅವರು ಮಾಲಾರ್ಪಣೆಯ ಮುಖಾಂತರ ಶುಭಕೋರಿ ಹಾರೈಸಿದರು. ಈ ಸಂದರ್ಭದಲ್ಲಿ ವಕೀಲರಾದ ಗುಲ್ಜರ್ ಸಿ.ಎನ್, ಹಿರಿಯ ವಕೀಲರಾದ ಸಿ.ಆರ್. ರವಿ, ಸಂತೋಷ್, ಮೋಹನ್, ಸಿಗರಾಜು, ಮಸಣ್ಣನಾಯಕ ಮತ್ತು ಪ್ರವೀಣ್ ಇದ್ದರು.

