ಚಾಮರಾಜನಗರ: ಸುಮಾರು ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಿದ್ದ ಚಾಲಾಕಿ ಖದೀಮರನ್ನು ಚಾಮರಾಜನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 418 ಗ್ರಾಂ ಚಿನ್ನ, ಎಂಟುವರೆ ಕೆಜಿ ಬೆಳ್ಳಿ, 2 ಲಕ್ಷ ರೂಪಾಯಿ ಬೆಲೆಬಾಳುವ ಕ್ಯಾಮರಾ ಮತ್ತು ಲೆನ್ಸ್ ಸೇರಿ ಒಟ್ಟು 42. 25 ಲಕ್ಷ ಮೌಲ್ಯದ ಪದಾರ್ಥಗಳು ವಶಪಡಿಸಿಕೊಳ್ಳಲಾಗಿದೆ.

ಕೃತ್ಯಕ್ಕೆ ಬಳಸಿದ ಮೋಟರ್ ಬೈಕ್ ಜಪ್ತಿ ಮಾಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಬಿಟಿ. ಕವಿತಾ ತಿಳಿಸಿದರು. ನಗರದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಿದ್ದಾರ್ಥನಗರದ ನಿವಾಸಿಯಾದ ರೇಣುಕಾ ಎಂಬುವವರ ಮನೆಗೆ ಕನ್ನಹಾಕಿ ಮನೆಯಲ್ಲಿಟ್ಟಿದ್ದ, ಚಿನ್ನಾಭರಣ ಬೆಳ್ಳಿಯ ಪದಾರ್ಥಗಳನ್ನು ದೋಚಿದ್ದರು.

ನಾಲ್ಕು ಆರೋಪಿಗಳನ್ನಾಗಿ ಎ1 ದೇವರಾಜು ಕೋಳಿಪಾಳ್ಯ ಗ್ರಾಮದ ನಿವಾಸಿ. ಎ2 ದೀಪುನಾಯ್ಕ ಹೌಸಿಂಗ್ ಬೋರ್ಡ್ ನಿವಾಸಿ. ಎ3 ಅರ್ಜುನ ಜಾಲಹಳ್ಳಿಹುಂಡಿ ನಿವಾಸಿ. ಎ4 ಅವಿನಾಶ್ ರಾಮಸಮುದ್ರ ನಿವಾಸಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ಪತ್ತೆ ಕಾರ್ಯದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾಗರ್, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಮಂಜುನಾಥ, ಆರ್. ಮೋಹನ್ ಕುಮಾರ್, ಮಹೇಶ್. ಮಹದೇವ. ಮಂಜುನಾಥ, ಮೋಹನ ಎನ್. ನಿಂಗರಾಜು ಹಾಗೂ ತಾಂತ್ರಿಕ ವಿಭಾಗದ ವೆಂಕಟೇಶ್, ಎಎಸ್‌ಐ, ಶಂಕರರಾಜು, ತನಿಖಾ ಸಹಾಯಕರಾದ ಮಹೇಶ್. ಶ್ರೀನಿವಾಸಮೂರ್ತಿ, ಗಿರೀಶ. ಚಾಲಕರಾದ ಮಲ್ಲೇಶ್ ಕುಮಾರ್ ಎಂ. ಭಾಗಿಯಾಗಿದವರನ್ನು ಶ್ಲಾಘಿಸಿದರು.