ಗುಂಡ್ಲುಪೇಟೆ : ಹಿಂದೂ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನ ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.
ಜೂನ್ 16 ರಂದು ಗುಂಡ್ಲುಪೇಟೆ ಪಟ್ಟಣದ ಮದ್ದಾನೇಶ್ವರ ಶಾಲಾ ಮುಂಭಾಗ ನಡೆದ ಹಿಂದೂ ಯುವಕನ ಹತ್ಯೆಗೆ ಸಂಬಂದಿಸಿದಂತೆ ಘಟನೆ ನಡೆದ ಮರುದಿನವೇ ಕರ್ನಾಟಕ ಗೃಹಮಂಡಳಿ ನಿವಾಸಿ ನಿಜಾಮುದ್ದೀನ್ ಎಂಬಾತನನ್ನ ಬಂದಿಸಿದ್ದ ಪೊಲೀಸರು ಇನ್ನೋರ್ವ ಆರೋಪಿ ಮಹಮ್ಮದ್ ರಫಿ ಬಿನ್ ಮಹಮದ್ ಜಿಯಾಯುದ್ದೀನ್ ( 35 ) ಎಂಬುವವನ್ನ ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಹತ್ಯೆ ನಡೆದ ಮರುದಿವಸ ಠಾಣಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು, ಹತ್ಯೆಗೀಡಾದ ಯುವಕನಿಗೆ 25 ಲಕ್ಷ ಪರಿಹಾರವನ್ನ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುವ ಜೊತೆಗೆ ಪೋಲೀಸ್ ಇಲಾಖೆ ವಿರುದ್ದ ವೈಫಲ್ಯದ ಆರೋಪ ಮಾಡಲಾಗಿತ್ತು.

