ಚಾಮರಾಜನಗರ: 5 ಹುಲಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ವಾಚರ್ ಗಳಿಗೆ ವೇತನ ಕೊಡದಿರುವುದು ಒಂದೂ ಕಾರಣ ಎಂದು ಆರೋಪ ಮಾಡಲಾಗಿದೆ.

ಅರಣ್ಯ ಇಲಾಖೆ ವಿರುದ್ಧ ಪರಿಸರವಾದಿ ಜೋಸೆಫ್ ಹೂವರ್ ಕಿಡಿಕಾರಿದ್ದಾರೆ. ಹೊರಗುತ್ತಿಗೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಚರ್‌ಗಳು ಮಾರ್ಚ್ ನಿಂದ ಸಂಬಳ ಬಾಕಿ ಇದೆ.

ವಾಚರ್ ಗಳಿಗೆ ವೇತನ ಕೊಡದಿದ್ದರಿಂದ ಮೈ ಮರೆತಿದ್ದಕ್ಕೆ 5 ಹುಲಿ ಸಾವನ್ನಪ್ಪಿದೆ. ಅಮಾನತಾಗಿದ್ದ ಚಕ್ರಪಾಣಿ ಅವರನ್ನು ಡಿಸಿಎಫ್ ಆಗಿ ಸರ್ಕಾರ ನೇಮಕ ಮಾಡಿದ್ದು ಸರಿಯಲ್ಲ ಎಂದು ಹೂವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.