ಚಾಮರಾಜನಗರ: ಮನೆಯಲ್ಲಿ ಅಡಿಗೆ ಮಾಡಲು ಸೌದೆ ಒಲೆ ಹಚ್ಚುವಾಗ ಆಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಂಡು ಮನೆ ಸಂಪೂರ್ಣ ಭಸ್ಮವಾಗಿದ್ದು, ಹಾಸಿಗೆ ಕೆಳಗೆ ಮರದ ಪೆಟ್ಟಿಗೆಯಲ್ಲಿ ಇಟ್ಟಿದ್ದ ಒಂದು ಲಕ್ಷ ರೂಪಾಯಿ ಸುಟ್ಟು ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹೊಸಪಾಳ್ಯ ಗ್ರಾಮದ ನಾಗಮ್ಮರವರು ಅಡುಗೆ ಮಾಡುವ ಸಲುವಾಗ ಮನೆಯಲ್ಲಿದ್ದ ಸೌದೆ ಒಲೆಯನ್ನು ಹಚ್ಚುವಾಗ ಬೆಂಕಿ ಅವಘಡ ಸಂಭವಿಸಿದ್ದು, ಕೂಡಿಟ್ಟ ಒಂದು ಲಕ್ಷ ರೂ ಸುಟ್ಟು ಹೋಗಿದೆ. ನೂರು ರೂ ಮುಖಬೆಲೆಯ ನೋಟುಗಳು ಅರ್ಧ ಮತ್ತು 500 ರೂ ಮುಖಬೆಲೆಯ ನೋಟುಗಳು ಬೆಂಕಿಗೆ ಆಹುತಿಯಾಗಿವೆ.

