ಗುಂಡ್ಲುಪೇಟೆ : ಪ್ರೀತಿಸಿದಾಕೆ ಕೈಕೊಟ್ಟಳು ಎಂಬ ಕಾರಣಕ್ಕೆ ಮನನೊಂದ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ನಡೆದಿದೆ.
ಸಂತೋಷ್ (25) ನೇಣಿಗೆ ಶರಣಾದ ದುರ್ದೈವಿಯಾಗಿದ್ದು ಸಾಗಡೆ ಗ್ರಾಮದ ಯುವತಿಯೋರ್ವಳನ್ನ ಪ್ರೇಮಿಸುತ್ತಿದ್ದಾಗಿ ಮತ್ತು ಮೊಸಹೋಗಿರುವುದಾಗಿ ವಿಡಿಯೋದಲ್ಲಿ ಪ್ರಸ್ತಾಪಿಸಿರುವ ಈತ ಬನ್ನಿತಾಳಪುರ ಗ್ರಾಮದ ಹೊರವಲಯದ ಜಮೀನಿನಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ,
ನನ್ನ ಸಾವಿಗೆ ಯುವತಿಯೇ ನೇರ ಹೊಣೆ ಎಂದು ಹೇಳಿರುವ ಯುವಕ ತನ್ನ ಮೊಬೈಲ್ ನಲ್ಲಿ ದಾಖಲೆಗಳನ್ನ ಸಂಗ್ರಹಿಸಿಟ್ಟಿರುವುದಾಗಿ ತಿಳಿಸಿದ್ದಾನೆ. ಘಟನಾ ಸಂಬಂದ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

