ಗುಂಡ್ಲುಪೇಟೆ: ಮಂಗಲ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ ನಡೆಸಲು ಯತ್ನಿಸಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮಂಗಲ ಸಮೀಪ ಶುಕ್ರವಾರ ಸಂಜೆ 7.30 ರ ಸಮಯದಲ್ಲಿ ನಡೆದಿದ್ದು ಆನೆ ದಾಳಿ ದಾಳಿಯಿಂದ ಕೆಳಗೆ ಬಿದ್ದು ಗಾಯಗೊಂಡ ಇಬ್ಬರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

ತಾಲೂಕಿನ ಕಾಡಂಚಿನ ಮಂಗಲ ಗ್ರಾಮದ ಬಂಗಾರಿ ಹಾಗೂ ಅತ್ತಿಗೆ ರತ್ನಮ್ಮ ಅವರು ಗುಂಡ್ಲುಪೇಟೆ ಪಟ್ಟಣದಿಂದ ವಾಪಾಸ್ ಊರಿಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾಡಾನೆ ಏಕಾಏಕಿ ಬೈಕ್ ನತ್ತ ನುಗ್ಗಿ ಬಂದಿದೆ.

ಆನೆ ದಾಳಿಗೆ ಬೆದರಿದ ಬಂಗಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ, ಸದ್ಯ ಆನೆ ದಾಳಿಯಿಂದ ಪಾರಾದ ಬಂಗಾರಿ ಹಾಗೂ ರತ್ನಮ್ಮ ಅವರನ್ನ ಅರಣ್ಯ ಇಲಾಖೆ ವಾಹನದಲ್ಲಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.