ಗುಂಡ್ಲುಪೇಟೆ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ನಡೆಸಿದ ಕಾಡುಹಂದಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಭೀಮನಭೀಡು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಭೀಮನಭೀಡು ಗ್ರಾಮದ ಗೋಪಾಲಶೆಟ್ಟಿ ಎಂಬ ರೈತ ಕಾಡು ಹಂದಿ ದಾಳಿಗೆ ಸಿಲುಕಿ ತೀವ್ರತರವಾದ ಗಾಯಕ್ಕೊಳಗಾಗಿದ್ದಾರೆ, ಇತ್ತೀಚಿಗೆ ರೈತರ ಜಮೀನುಗಳಿಗೆ ವನ್ಯಜೀವಿಗಳು ಲಗ್ಗೆಯಿಡುತ್ತಿದ್ದು ರೈತರ ಫಸಲು ಕೈ ಸೇರುವ ಮುಂಚೆಯೇ ನಾಶವಾಗಿ ಹೋಗುತ್ತಿವೆ ಜೊತೆಯಲ್ಲೇ ಕಾಡುಪ್ರಾಣಿಗಳ ದಾಳಿಗೆ ಸಿಲುಕಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಮ್ಮೊಮ್ಮೆ ಪ್ರಾಣವನ್ನ ಲೆಕ್ಕಿಸದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ರೈತ ಸಂಘ ತಾಲೂಕು ಅಧ್ಯಕ್ಷ ಲೋಕೇಶ್ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಂದಿ ದಾಳಿಗೆ ಸಿಲುಕಿ ನರಳುತ್ತಿದ್ದ ರೈತನನ್ನ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದರೆ ಸೂಕ್ತ ಚಿಕಿತ್ಸೆ ನೀಡದೆ ಸತಾಯಿಸುತ್ತಿದ್ದಾರೆ, ಬೆಳೆಗ್ಗೆಯಿಂದಲೂ ಪೆಟ್ಟು ತಿಂದ ರೈತನಿಗೆ ಚಿಕಿತ್ಸೆ ನೀಡದೆ ಬೇಜವಾಬ್ದಾರಿತನದಿಂದ ವೈದ್ಯರು ಹಾಗೂ ಸಿಬ್ಬಂದಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.