ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಪಾರಿ ವಾಹನದ ಮೇಲೆ ಸಲಗವೊಂದು ದಾಳಿ ನಡೆಸಲು ಮುಂದಾಗಿ ವಾಹನವನ್ನ ಹಿಮ್ಮೆಟ್ಟಿಸಿರುವ ಘಟನೆ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಸಪಾರಿ ವಾಹನ ಚಾಲಕ ನಿರಂಜನ್ ಚಾಣಾಕ್ಷತಣದಿಂದ ಪ್ರವಾಸಿಗರು ನಿಟ್ಟುಸಿರುಬಿಟ್ಟಿದ್ದಾರೆ, ಸಪಾರಿ ಮಾರ್ಗದಲ್ಲಿ ತೆರಳುತ್ತಿದ್ದ ವಾಹನವನ್ನ ಸಲಗ ಅಟ್ಟಿಸಿಕೊಂಡು ಬಂದರೂ ಸಹ ಹಿಮ್ಮುಖವಾಗಿ ವಾಹನವನ್ನ ಜಾಗರುಕವಾಗಿ  ಚಲಾಯಿಸಿ ಪ್ರವಾಸಿಗರನ್ನ ಕೂದಲೆಳೆ ಅಂತರದಲ್ಲಿ ಪಾರು ಮಾಡಿದ್ದಾರೆ. ಆನೆಯು ದಾಳಿಗೆ ಧಾವಿಸಿದ ದೃಶ್ಯವನ್ನ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.