ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯದ ಹೊಂಗಹಳ್ಳಿ ಹಾಗೂ ಮುಕ್ತಿ ಕಾಲೋನಿ ರೈತರ ಜಮೀನಿಗೆ ನುಗ್ಗಿದ ಒಂಟಿಯಾನೆ ರೈತರು ಬೆಳದಿದ್ದ ಬಾಳೆ ಹಾಗೂ ಟೋಮೋಟೊ ಬೆಳೆಯನ್ನ ನಾಶಪಡಿಸಿದೆ.

ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಹಾಗೂ ಮುಕ್ತಿಕಾಲೋನಿ ರೈತರ ಜಮೀನಿಗೆ ಪ್ರವೇಶಿಸಿದ ಒಂಟಿಯಾನೆ ಅಪಾರ ಪ್ರಮಾಣದ ಬೆಳೆಯನ್ನ ನಾಶಪಡಿಸಿದೆ, ಗುರುಮಲ್ಲೇಗೌಡ ಹಾಗೂ ಬಸವೇಗೌಡ ಎಂಬವರ ಜಮೀನಿಗೆ ನುಗ್ಗಿದ ಸಲಗ ಬಾಳೆಫಸಲು ಹಾಗೂ ಟ್ರೇಗಳಲ್ಲಿ ಶೇಖರಿಸಿಟ್ಟಿದ್ದ ಟೊಮೊಟೊ ವನ್ನ ನಾಶಪಡಿಸಿದೆ.

ಈಗಾಗಲೇ ಸಾಕಷ್ಟು ನಷ್ಟದಲ್ಲಿರುವ ರೈತರಿಗೆ ವನ್ಯಪ್ರಾಣಿಗಳ ಹಾವಳಿಯಿಂದ ನಷ್ಟದ ದುಪ್ಪಟ್ಟು ಪರಿಣಾಮವಾಗುತ್ತಿದೆ, ಬೆಳೆ ನಾಶವಾದ್ರೆ ಸೂಕ್ತಪರಿಹಾರ ನೀಡಲು ಅರಣ್ಯ ಇಲಾಖೆ ಮೀನಾಮೇಷ ಹಾದಿಯನ್ನಿಡಿದು ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡ ಬರಗಿ ಮಹೇಶ್ ದೂರಿದ್ದಾರೆ.

ಮದ್ದೂರು ವಲಯದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ರಾತ್ರಿ ವೇಳೆ ಗಸ್ತು ಸಿಬ್ಬಂದಿಗಳನ್ನ ನೇಮಕ ಮಾಡಿ ರೈತರ ಜಮೀನುಗಳಿಗೆ ಆನೆಗಳು ಪ್ರವೇಶಿಸದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದ್ದಾರೆ.