ಚಾಮರಾಜನಗರ : ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆ ಬಂದಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.
ಹಲವು ದಿನಗಳಿಂದ ಅಮಚವಾಡಿ ಗ್ರಾಮದ ಜನರನ್ನ ಆತಂಕಕ್ಕೊಳಗಾಗಿಸಿದ್ದ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ, ಗ್ರಾಮದ ಹಾನುಮಂತಶೆಟ್ಟಿ ಎಂಬವರ ಕರುವನ್ನ ಬಲಿ ಪಡೆದಿದ್ದ ಚಿರತೆಯ ಕಾಟದಿಂದ ಬೇಸತ್ತಿದ್ದ ಸಾರ್ವಜನಿಕರು ಸೆರೆಗೆ ಒತ್ತಾಯಿಸಿದ್ದರು, ಇದಾದ ಬೆನ್ನಲ್ಲೇ ಚಿರತೆ ಸೆರೆಗೆ ಮುಂದಾದ ಅರಣ್ಯ ಇಲಾಖೆ ಬೋನ್ ಇರಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

