ಚಾಮರಾಜನಗರ: ನಂಜೇದೇವನಪುರ ಗ್ರಾಮದಲ್ಲಿ 5 ಹುಲಿ ಪ್ರತ್ಯಕ್ಷ ಪ್ರಕರಣದಲ್ಲಿ ಡ್ರೋನ್ ಬಳಸಿ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಡಿಸಿಎಫ್, ಎಸಿಎಫ್ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಅಂತಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿಯನ್ನು ಹಿಡಿಯಿರಿ ಅಥವಾ ಕೊಲ್ಲಲ್ಲು ನಮಗೆ ಅವಕಾಶ ಕೊಡಿ. ಕಳೆದ ಒಂದು ತಿಂಗಳಿಂದಲೂ ಹುಲಿ ಬಗ್ಗೆ ಮಾಹಿತಿ ಕೊಟ್ಟರು ಕೂಡ ಕಾರ್ಯಾಚರಣೆ ಮಾಡಿಲ್ಲ.
ಪಟಾಕಿ ತಂದು ಹುಲಿ ಓಡಿಸ್ತೀನಿ ಅಂತಿದ್ದಾರೆ. ಹುಲಿ ಸೆರೆಗೆ ರೈತರು ಆಗ್ರಹಿಸಿದ್ದಾರೆ. 30 ಕ್ಕೂ ಹೆಚ್ಚು ಹಸುಗಳನ್ನು ಹುಲಿ ಕೊಂದು ತಿಂದಿವೆ. ತೋಟದ ಮನೆಯಲ್ಲಿ ವಾಸ ಮಾಡ್ತಿದ್ದವರು ಖಾಲಿ ಮಾಡಿ ಊರಿನತ್ತ ಬಂದಿದ್ದಾರೆ.
ಹುಲಿ ಸೆರೆಹಿಡಿಯದಿದ್ರೆ ಅರಣ್ಯಾಧಿಕಾರಿಗಳ ವಿರುದ್ಧ ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ಕೊಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ನಂಜೇದೇವನಪುರದಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

