ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ‘ದೀಪಾವಳಿ ಸಂಭ್ರಮ’

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ನ. 11ರಂದು ‘ದೀಪಾವಳಿ ಸಂಭ್ರಮ’ ಆಯೋಜಿಸಲಾಗಿತ್ತು.

ಅರ್ಚಕ ಸುದರ್ಶನ ತಂತ್ರಿ ಎಡಪದವು ಅವರು ಗೋಪೂಜೆ, ವಾಹನ ಪೂಜೆ, ಆಯುಧ ಪೂಜೆ, ಶಾರದಾ ಪೂಜೆ ಮತ್ತು ಲಕ್ಷ್ಮೀ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು. ಕೇಂದ್ರದ ಸ್ವಚ್ಛತಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ವಸ್ತ್ರದಾನ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ, ಸೋನಿಯಾ ಯಶೋವರ್ಮ ಅವರು ಮಾತನಾಡಿ, “ನಮ್ಮ ಆಚರಣೆ, ಸಂಸ್ಕೃತಿಗಳಲ್ಲಿ ಹಬ್ಬಗಳು ವಿಶೇಷ ಸ್ಥಾನ ವಹಿಸುತ್ತವೆ. ಈ ನಿಟ್ಟಿನಲ್ಲಿ ದೀಪಾವಳಿ ಆಚರಣೆಗಳಲ್ಲಿ ಕೂಡ ಪ್ರಮುಖವಾಗಿದೆ. ಹಬ್ಬಗಳು ಮನುಷ್ಯ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ” ಎಂದರು.

ಇನ್ನೋರ್ವ ಮುಖ್ಯ ಅತಿಥಿ, ಜಾನಪದ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉಜಿರೆ ಎಸ್ ಡಿ ಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರವೀಶ್ ಪಡುಮಲೆ ಅವರನ್ನು ಸಮ್ಮಾನಿಸಲಾಯಿತು.

ಅವರು ಮಾತನಾಡಿ, ಹಬ್ಬಗಳ ಮಹತ್ವ, ಉದ್ದೇಶ, ಮತ್ತು ಆಚರಿಸುವ ರೀತಿ ತಿಳಿಸಿದರು. ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವೃಂದದವರು ದೀಪಗಳನ್ನು ಬೆಳಗಿದರು. ಆ ಸಂದರ್ಭದಲ್ಲಿ ತುಳುನಾಡಿನಲ್ಲಿ ಬಲೀಂದ್ರ ಪೂಜೆ ವೇಳೆ ಬಲೀಂದ್ರನನ್ನು ಕರೆಯುವ ವಿಧಾನವನ್ನು ಡಾ. ರವೀಶ್ ತಿಳಿಸಿಕೊಟ್ಟರು.

ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ಶುಭ ಹಾರೈಸಿದರು. ಎಸ್ ಡಿ ಎಂ ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಹಬ್ಬಗಳ ಮಹತ್ವ, ಸಾರವನ್ನು ಅರಿತು ಅದನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕ್ಲಾಸಿಕ್ ಟೈಗರ್ಸ್ ಧರ್ಮಸ್ಥಳ ತಂಡದಿಂದ ‘ಪಿಲಿ ನಲಿಕೆ’ ಪ್ರದರ್ಶನಗೊಂಡಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶ್ರೀವಿದ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಎಸ್.ಡಿ.ಎಂ. ಬಿ.ವೋಕ್ ಕೋರ್ಸ್ ಸಂಯೋಜಕ ಸುವೀರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

Gayathri SG

Recent Posts

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ದಿನಾಂಕ ಫಿಕ್ಸ್

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ…

8 mins ago

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಬರ್ಬರ ಹತ್ಯೆ

ಇಲ್ಲಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

10 mins ago

ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳ ಹೇಳಿಕೆ : ಝೀ ವಾಹಿನಿ ವಿರುದ್ಧ ಗ್ಯಾರೇಜ್‌ ಮಾಲಿಕರ ಸಂಘ ಆಕ್ರೋಶ

ಇತ್ತೀಚೆಗಷ್ಟೆ ಝೀ ವಾಹಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳ ಬಗ್ಗೆ ಹೇಳಿಕೆ ನೀಡಲಾಗಿತ್ತು ಹಾಗೂ ತೀರ್ಪುಗಾರರ ವಿರುದ್ಧ ಕೇಸ್‌ ಕೂಡ…

20 mins ago

ನನ್ನ ಹೆಸರು ಹೇಳದಿದ್ದರೆ ಕುಮಾರಸ್ವಾಮಿಗೆ ನಿದ್ದೆನೇ ಇಲ್ಲ ಎಂದ ಡಿಕೆ ಶಿವಕುಮಾರ್‌

ನನ್ನ ಹೆಸರು ಹೇಳದಿದ್ದರೆ ಕುಮಾರಸ್ವಾಮಿಗೆ ನಿದ್ದೆಯೇ ಬರುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಮಾಜಿ ಸಿಎಂ ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ.

26 mins ago

ಕುಟುಂಬಸ್ಥರೊಂದಿಗೆ ಈಜು ಕಲಿಯಲು ಹೋದ ಬಾಲಕ ನೀರುಪಾಲು

ಈಜು ಕಲಿಯಲು ಹೋದ ಬಾಲಕ ನೀರುಪಾಲಾಗಿರುವ ಘಟನೆ ರಾಯಚೂರು ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ನಡೆದಿದೆ.

41 mins ago

ಚಾಲಕನ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿಗೆ ಕಾರೊಂದು ನುಗ್ಗಿ ಉಲ್ಟಾ ಬಿದ್ದಿರುವ ಘಟನೆ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕನಲ್ಲಿ ತಡರಾತ್ರಿ ನಡೆದಿದೆ.

1 hour ago