ಉಜಿರೆ: ಎಸ್. ಡಿ. ಎಂ ನ ನವೀಕೃತ ಡೀನ್ ಚೇಂಬರ್ ಗೆ ಚಾಲನೆ

ಉಜಿರೆ: ಎಸ್. ಡಿ .ಎಂ. ಸ್ನಾತ್ತಕೋತ್ತರ ಕೇಂದ್ರದ ನವೀಕೃತ ಡೀನ್ ಚೇಂಬರನ್ನು ಎಸ್. ಡಿ. ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ . ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು.

ಕಳೆದ ಎರಡು ತಿಂಗಳುಗಳಿಂದ ಡೀನ್ ಚೇಂಬರಿಗೆ ಹೊಸ ಕಾಯಕಲ್ಪ ನೀಡುವ ಕಾಮಗಾರಿ ಚಾಲ್ತಿಯಲ್ಲಿತ್ತು .ಕಾಮಗಾರಿ ಪೂರ್ಣಗೊಂಡು ಸುಸಜ್ಜಿತ ವಿನ್ಯಾಸದೊಂದಿಗೆ ಮರುರೂಪುಗೊಂಡ ಡೀನ್ ಚೇಂಬರ್ ಗೆ ಡಿ.ಹರ್ಷೇಂದ್ರ ಕುಮಾರ್ ಬುಧವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ .ಪಿ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು . ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಗೆ ಸಂಬಂಧಿಸಿದ ಮಹತ್ವದ ನಿರ್ಣಯಗಳ ನೆಲೆಯಾಗಿ ಡೀನ್ ಚೇಂಬರ್ ಹೆಗ್ಗುರುತು ಮೂಡಿಸಲಿ ಎಂದು ಆಶಿಸಿದರು. ಡೀನ್ ಚೇಂಬರ್ ಕಡೆಗೆ ಸಮಸ್ಯೆಗಳನ್ನು ನಿವೇದಿಸಿ ಕೊಂಡು  ಬರುವವರಿಗೆ ಪರಿಹಾರ ಸಿಗಲಿ, ಈ ಮೂಲಕ ಉನ್ನತ ಶಿಕ್ಷಣ ದ ಗುಣಮಟ್ಟ ಹೆಚ್ಚಿಸುವ ಕೊಡುಗೆಗಳನ್ನು ನೀಡಲಿ ಎಂದು ಹೇಳಿದರು.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ , ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್ ಹೆಗ್ಡೆ ಬಿ. ಎ ,ಸ್ನಾತ್ತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಭಟ್ ನಿರೂಪಿಸಿದರು.

Ashika S

Recent Posts

ನಟ ಶೇಖರ್ ಸುಮನ್, ರಾಧಿಕಾ ಖೇರಾ ಬಿಜೆಪಿಗೆ ಸೇರ್ಪಡೆ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಈ ನಡುವೆ ಬಾಲಿವುಡ್ ನಟ ಶೇಖರ್​ ಸುಮನ್ ಹಾಗೂ ಕಾಂಗ್ರೆಸ್​ನ…

10 mins ago

ಊಟಿಗೆ ಪ್ರಯಾಣ ಬೆಳೆಸಲಿರುವ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಿಂದ ರಿಲ್ಯಾಕ್ಸ್ ಪಡೆಯಲು ಹೆಚ್‍ಎಎಲ್‍ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಊಟಿಗೆ ತೆರಳಲಿ ಮೂರು ದಿನಗಳ…

11 mins ago

ಕೇರಳದ ಐವರಲ್ಲಿ ʻವೆಸ್ಟ್‌ ಲೈನ್‌ ಜ್ವರʼ ಪತ್ತೆ

ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ವೆಸ್ಟ್‌ ನೈಲ್‌ ಫೀವರ್‌ನ ಐದು ಪ್ರಕರಣಗಳು ಪತ್ತೆಯಾಗಿವೆ. ಅವರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಮನೆಗಳಲ್ಲೇ ಚಿಕಿತ್ಸೆ…

23 mins ago

ಅಮೆರಿಕದಿಂದ ಬಂದು ಮೊದಲ ಮತ ಚಲಾಯಿಸಿ ಸಂಭ್ರಮಿಸಿದ ವಿದ್ಯಾರ್ಥಿನಿ

ವಿದ್ಯಾರ್ಥಿನಿಯೊಬ್ಬರು ಅಮೆರಿಕದಿಂದ ಹುಬ್ಬಳ್ಳಿಗೆ ಬಂದು ಲೋಕಸಭಾ ಚುನಾವಣೆಗೆ ತನ್ನ ಹಕ್ಕು ಚಲಾಯಿಸಿದ್ದಾರೆ.

29 mins ago

ಮತದಾನದ ಫೋಟೊ ಹಂಚಿಕೊಂಡ ವಿನೋದ ಅಸೋಟಿ ಅಭಿಮಾನಿ

ಇಲ್ಲಿನ ತನ್ವೀರ್ ಟಿ.ಎಂ ಎಂಬ ಯುವಕ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೋಟಿ ಅವರಿಗೆ ಮತ ಹಾಕಿದ್ದನ್ನು…

42 mins ago

ರೇವಣ್ಣ ಕಿಡ್ನಾಪ್ ಮಾಡಿದ ಮಹಿಳೆ ತೋಟದ ಮನೆಯಲ್ಲಿ ಸಿಕ್ಕಿಲ್ಲ: ಸಾರಾ ಮಹೇಶ್

ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಮಹಿಳೆ ತೋಟದ ಮನೆಯಲ್ಲಿ ಸಿಕ್ಕಿಲ್ಲ, ಎಂದು ಶಾಸಕ ಸಾರಾ ಮಹೇಶ್…

46 mins ago