ನಿಯಮಬದ್ಧ ತೆರಿಗೆ ಪಾವತಿಯಿಂದ ಸದೃಢ ಆರ್ಥಿಕತೆ – ಗಾಯತ್ರಿ ರಾವ್

ಉಜಿರೆ: ಭಾರತದ ತೆರಿಗೆ ಕಾಯ್ದೆ ಬಹಳಷ್ಟು ಉತ್ತಮವಾಗಿದ್ದು, ನಿಯಮಬದ್ಧ ತೆರಿಗೆ ಪಾವತಿಯಿಂದ ಸದೃಢ ಹಾಗೂ ಸಮತೋಲನ ಆರ್ಥಿಕ ಅಭಿವೃದ್ಧಿ ಸಾಧ್ಯವೆಂದು ಬೆಳ್ತಂಗಡಿಯ ಚಾರ್ಟರ್ಡ್ ಅಕೌಂಟೆಂಟ್ ಗಾಯತ್ರಿ ರಾವ್ ತಿಳಿಸಿದರು.

ಅವರು ಇತ್ತೀಚೆಗೆ ಶ್ರೀ.ಧ.ಮ ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗ ಅಯೋಜಿಸಿದ ‘ತೆರಿಗೆಯ ಮೂಲಭೂತ ಅಂಶಗಳು’ ಎಂಬ ಅತಿಥಿ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮಾತನಾಡುತಿದ್ದರು.

“ಚಾಣಕ್ಯ ನೀತಿಯಲ್ಲಿರುವ ಹಾಗೆ ತೆರಿಗೆ ಎಂದರೆ ಜೇನು ಹೂವಿನಿಂದ ಮಕರಂದವನ್ನು ಹೀರಿ ಹೇಗೆ ಜೇನು ತುಪ್ಪವನ್ನು ಕೊಡುತ್ತದೊ ಅದೇ ರೀತಿ ಸರಕಾರವು ಜನರಿಂದ ತೆರಿಗೆಯನ್ನು ಸಂಗ್ರಹಿಸಿ ಜನರಿಗೆ ಉಪಯೋಗವಾಗುವಂತ ಕೆಲಸಗಳನ್ನು ಮಾಡಬೇಕು” ಎಂದು ಹೇಳಿದರು.

ತೆರಿಗೆ ಪಾವತಿಯ ಬಗ್ಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಂಡು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಆರ್ಥಿಕತೆ ಬಲಗೊಳ್ಳುವುದಲ್ಲದೆ ಸಾಮಾಜಿಕ ನ್ಯಾಯವನ್ನು ಕೂಡ ಖಚಿತಪಡಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು. ವಿಭಾಗ ವರಿಷ್ಠ ಗಣರಾಜ್ ಕೆ, ಪ್ರಧ್ಯಾಪಕರಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಷಾ ಜಿ ಶೆಟ್ಟಿ ಸ್ವಾಗತಿಸಿ, ಪೂರ್ವಿತ ವಂದಿಸಿದರು.

Gayathri SG

Recent Posts

ಅಶ್ಲೀಲ ವಿಡಿಯೋ​; ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ಆಗಮನ ಸಾಧ್ಯತೆ

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್​ಡಿ ರೇವಣ್ಣ ಬಂಧನ ಬೆನ್ನಲ್ಲೇ ಪ್ರಜ್ವಲ್ ಬೇಟೆ ಕೂಡ…

4 mins ago

ಬೀದರ್‌ನಲ್ಲಿ ಪರಿಶಿಷ್ಟ ಮುಖಂಡ ಬಿಜೆಪಿ ಸೇರ್ಪಡೆ

ಔರಾದ್‌ ತಾಲ್ಲೂಕಿನ ವಡಗಾಂವ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪರಿಶಿಷ್ಟ ಜಾತಿಯ ಮುಖಂಡ ಬಾಬುರಾವ ಅಡಕೆ ಅವರು ನಗರದಲ್ಲಿ ಶನಿವಾರ ಬಿಜೆಪಿ…

19 mins ago

ಬೀದರ್‌ನಲ್ಲಿ ಸರಳ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮೇ 10ರಂದು ಸರಳ ಹಾಗೂ ಸಾಂಕೇತಿಕವಾಗಿ…

31 mins ago

ಗುಮ್ಮಟ ನಗರಿಯಲ್ಲಿ ಕಣ್ಮನ ಸೆಳೆಯುವ ಶಿವಗಿರಿ

ಸಾಮಾನ್ಯವಾಗಿ ಶಿವನ ಮೂರ್ತಿಯನ್ನು ಎಲ್ಲ ಕಡೆ ಸ್ಥಾಪಿಸುತ್ತಾರೆ. ಆದರೆ ವಿಜಯಪುರದಲ್ಲಿನ ಶಿವಮೂರ್ತಿ ಒಂಚೂರು ವಿಭಿನ್ನವಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿದೆ

41 mins ago

ಉಮೇಶ ವಂದಾಲ ನೇತೃತ್ವದಲ್ಲಿ ಮನೆಮನೆ ಪ್ರಚಾರ

ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ನಗರದ ವಾರ್ಡ್ ಸಂಖ್ಯೆ 3…

54 mins ago

ಅಸ್ಸಾಂ, ಗೋವಾದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಏತನ್ಮಧ್ಯೆ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ದೇಶದ ಕೆಲವು ರಾಜ್ಯಗಳು ಮತ್ತು…

1 hour ago