ಎಸ್‌ಡಿಎಂ ಕಾಲೇಜಿನಲ್ಲಿ ರಾಜ್ಯ ಮಟ್ಟದ ‘ಕಲಾನು ಸಂಧಾನ ಶಿಬಿರ’

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯ ಉಜಿರೆಯ ಸಮ್ಯಗ್ದರ್ಶನ ಸಭಾಭವನದಲ್ಲಿ ಮೇ 26 ಮತ್ತು 27ರಂದು 25ನೇ ವರ್ಷದ ಎರಡು ದಿನಗಳ ರಾಜ್ಯ ಮಟ್ಟದ ಸಾಹಿತ್ಯ ಅಧ್ಯಯನದ ‘ಕಲಾನುಸಂಧಾನ’ ಶಿಬಿರ ಆಯೋಜಿಸಲಾಗಿದೆ.

ಶ್ರೀ.ಧ.ಮ ಸ್ವಾಯತ್ತ ಕಾಲೇಜಿನ ಕನ್ನಡ ಸಂಘ ಮತ್ತು ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಪೂರ್ವಾಹ್ನ 10 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವಿ.ಹೆಗ್ಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಖ್ಯಾತ ಕಥೆಗಾರ ವಸುಧೇಂದ್ರ ದಿಕ್ಸೂಚಿ ಭಾಷಣ ಮಾಡಲಿದ್ದು, ಶ್ರೀ.ಧ.ಮ. ಸ್ವಾಯತ್ತ ಮಹಾವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಬಿ.ಪಿ ಸಂಪತ್ ಕುಮಾರ್ ರಜತ ಅವಲೋಕನ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡದ ಶ್ರೇಷ್ಠ ಲೇಖಕರು ಬರೆದ ಮೂರರಿಂದ ನಾಲ್ಕು ಕೃತಿಗಳನ್ನು ಶೇಕಡ 50ರ ರಿಯಾಯಿತಿಯಲ್ಲಿ ನೀಡಲಾಗುವುದು.

ನೀನಾಸಂ ಪ್ರತಿಷ್ಠಾನ ನಿರ್ದೇಶಕ ಪ್ರೊ.ಟಿ.ಪಿ ಅಶೋಕ, ಸಾಗರದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜಸವಂತ್ ಜಾಧವ್, ಯುವ ಚಿಂತಕ ಡಾ. ಮಾಧವ ಚಿಪ್ಪಳ್ಳಿ, ರಂಗಕರ್ಮಿ ವಿದ್ಯಾ ಹೆಗಡೆ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Gayathri SG

Recent Posts

ಯುನಿಸೆಫ್ ಇಂಡಿಯಾʼಗೆ ಕರೀನಾ ಕಪೂರ್ ರಾಯಭಾರಿ

ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 2014ರಿಂದ ಯುನಿಸೆಫ್‌ ಜತೆ ನಟು ಹೊಂದಿ, ಅದರ…

6 mins ago

ಶಂಕರ್‌ನಾಗ್ ಹೆಸರಿನಲ್ಲಿ ಮಹತ್ವದ ಘೋಷಣೆ ಮಾಡಲಿದೆ ಕರ್ನಾಟಕ ಸರ್ಕಾರ

ನಟ, ನಿರ್ದೇಶಕ ಶಂಕರ್ ನಾಗ್ ನಮ್ಮನ್ನು ಅಗಲಿ ದಶಕಗಳೇ ಕಳೆದರೂ ಕೂಡ ಅವರ ನೆನಪು ಸದಾ ಕನ್ನಡಿಗರ ಮನದಲ್ಲಿ ಹಸಿರಾಗಿರುತ್ತದೆ.…

10 mins ago

ಪೆಟ್ರೋಲ್‌ ತುಂಬಿದ್ದ ಟ್ಯಾಂಕರ್‌ ಪಲ್ಟಿ: ಭಾರೀ ಪ್ರಮಾಣದ ಪೆಟ್ರೋಲ್ ಸೋರಿಕೆ

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್‌ ತುಂಬಿದ್ದ ಟ್ಯಾಂಕರ್‌ ಪಲ್ಟಿಯಾದ ಘಟನೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಡೆದಿದೆ.

20 mins ago

ರೇವಣ್ಣ ವಿರುದ್ಧದ ಕಿಡ್ನ್ಯಾಪ್​ ಕೇಸ್​: ತೋಟದ ಸಿಬ್ಬಂದಿ ಸ್ಫೋಟಕ ಹೇಳಿಕೆ

ಸಂತ್ರಸ್ತ ಮಹಿಳೆ ಕಿಡ್ನ್ಯಾಪ್​ ಆರೋಪ ಪ್ರಕರಣದಲ್ಲಿ ಹೆಚ್​ಡಿ ರೇವಣ್ಣ ಬಂಧನವಾಗಿದೆ. ಎಸ್​ಐಟಿ ಅಧಿಕಾರಿಗಳು ಮೈಸೂರಿನ ಹುಣಸೂರು ತಾ| ಕಾಳೇನಹಳ್ಳಿಯಲ್ಲಿ ಸಂತ್ರಸ್ತ…

24 mins ago

ಸುಚರಿತಾ ಟಿಕೆಟ್‌ ನಿರಾಕರಣೆ : ನಾರಾಯಣ್‌ ಪಟ್ನಾಯಕ್‌ಗೆ ʻಕೈʼ ಅವಕಾಶ

ಸುಚರಿತಾ ಮೊಹಂತಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ನೀಡಿದ ಬೆನ್ನಲ್ಲೆ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ…

43 mins ago

ಮೂಕ ಮಗುವನ್ನು ಕಾಲುವೆಗೆ ಎಸೆದ ತಾಯಿ : ಮೊಸಳೆ ಬಾಯಲ್ಲಿತ್ತು ಮೃತದೇಹ

ಗಂಡನ ಮೇಲಿನ ಸಿಟ್ಟಿಗೆ ಹೆತ್ತ ಮಗು ಎಂದು ಯೋಚಿಸದೆ ಮಗುವನ್ನು ನಾಲೆಗೆ ಎಸದು ಬಂದಿರುವ ದಾರಣ ಘಟನೆ ಉತ್ತರ ಕನ್ನಡ…

1 hour ago