ರಾಷ್ಟ್ರಮಟ್ಟದ ಸಾಕ್ಷ್ಯ ಚಿತ್ರೋತ್ಸವದಲ್ಲಿ ಎಸ್.ಡಿ.ಎಮ್ ಗೆ ಪ್ರಥಮ ಸ್ಥಾನ

ಬೆಂಗಳೂರಿನ ಗಾಯನ ಸಮಾಜ ಸಭಾಂಗಣದಲ್ಲಿ ಅವಾರ್ಡಿಯೊ ಇವೆಂಟ್ಸ್ ಮೆನೆಜ್ಮೆಂಟ್ ಸಂಸ್ಥೆ ರವಿವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವ ಸಿಸನ್ ಎರಡರಲ್ಲಿ ಎಸ್,ಡಿ,ಎಮ್ ಕಾಲೇಜು ಉಜಿರೆ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿಧ್ಯಾರ್ಥಿಗಳ ನಿರ್ಮಾಣದ ಸಾಕ್ಷ್ಯಚಿತ್ರ ಪ್ರಥಮ ಸ್ಥಾನದ ಗರಿ ಪಡೆದುಕೊಂಡಿದೆ.

ಈ ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸದಲ್ಲಿ ೧೫೦ ಕ್ಕೂ ಹೆಚ್ಚು ತಂಡ ಬಾಗಿಯಾಗಿ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳನ್ನು ನೊಂದಾಯಿಸಿಕೊಂಡಿದ್ದರು. ಇವುಗಳ ಪೈಕಿ ಉಜಿರೆಯ ಎಸ್,ಡಿ,ಎಮ್ ಕಾಲೇಜಿನ ವಿಧ್ಯಾರ್ಥಿಗಳ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಅವಾರ್ಡಿಯೊ ಉತ್ತಮ ಸಾಕ್ಷ್ಯಚಿತ್ರ ನಿರ್ದೆಶನ ಎಂಬ ಅವಾರ್ಡಿನ ಜೊತೆಗೆ ಪ್ರಥಮ ಸ್ಥಾನವನ್ನು ನೀಡಲಾಯಿತು.

ಎಸ್,ಡಿ,ಎಮ್ ಮಲ್ಟಿಮೀಡಿಯಾ ಸ್ಟುಡಿಯೋ ನಿರ್ಮಾಣದ ಈ ಸಾಕ್ಷ್ಯಚಿತ್ರ ಪ್ರಸೀದ್ ಭಟ್ಟ ಸಾಹಿತ್ಯ ಮತ್ತು ನಿರ್ದೆಶನ, ಕಾರ್ತಿಕ್ ಹೆಗಡೆ ಛಾಯಾಗ್ರಹಣ ಹಾಗೂ ರಕ್ಷಿತ್ ರೈ ಸಂಕಲನವನ್ನ ಹೊಂದಿದೆ. ಶಿವ ಕುಮಾರ್ ಹಿನ್ನಲೆ ಧ್ವನಿ ಮತ್ತು ಸೋಮೆಶ್ವರ ಗುರುಮಠ ಉಪಶೀರ್ಷೀಕೆಯನ್ನ ನೀಡಿದ್ದಾರೆ.

ಆಪ್ರಿಕಾ ಮೂಲದ ಸಿದ್ದಿ ಬುಡಕಟ್ಟು ಸಮುದಾಯದ ಸಂಸ್ಕೃತಿ ಮತ್ತು ಆಚರಣೆಗಳ ಕುರಿತಾದ ಸಾಕ್ಷ್ಯಚಿತ್ರ ಇದಾಗಿದ್ದು ಅವರ ಬದುಕಿನಲ್ಲಿ ಹಾಸುಹೊಕ್ಕಿರುವ ಕಲಾ ಶ್ರೀಮಂತಿಕೆಯನ್ನ ಇದು ಕಟ್ಟುಕೊಟ್ಟಿದೆ. ಅಲ್ಪಪ್ರಮಾಣದಲ್ಲಿ ಇರುವ ಸಿದ್ದಿ ಜನಾಂಗದ ಮತ್ತು ಇಂದಿನ ಯುವ ಜನತೆಗೆ ಅವರ ಆಚರಣೆಯ ಪರಿಚಯವನ್ನ ಮಾಡಿಕೊಡುವ ಈ ಸಾಕ್ಷ್ಯಚಿತ್ರ ‘ಸಿದ್ದಿ ಸಾಂಗತ್ಯ’ ಶೀರ್ಷೀಕೆಯಡಿಯಲ್ಲಿ ಮೂಡಿಬಂದಿದೆ.

ಭಾರತದಲ್ಲಿ ವಾಸವಾಗಿರುವ ಪ್ರತಿ ಸಮುದಾಯಗಳು ಅವರದೆ ಆದ ಸಂಸ್ಕೃತಿ ಮತ್ತು ಆಚರಣೆಯನ್ನು ಹೊಂದಿದೆ. ಆದರೆ ಇಂದಿನ ಆಧಿನಿಕತೆಯ ಪರಿಣಾಮದಿಂದಾಗಿ ಅವು ತಮ್ಮ ಮೂಲ ಸೊಗಡನ್ನು ಕಳೆದುಕೊಳ್ಳುತ್ತಿದೆ. ಅವುಗಳಲ್ಲಿ ಸಿದ್ದಿ ಜನಾಂಗ ಕೂಡಾ ಒಂದು. ಅವರಲ್ಲೆ ಕೆಲವರು ಅದನ್ನು ಕಾಪಾಡಿಕೊಂಡು ಹೋಗುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಅವರನ್ನ ಬೆಂಬಲಿಸುವ ಯುವ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸಿ ಜಾಗೃತಿಮೂಡಿಸುವ ಪ್ರಯತ್ನವೇ ‘ಸಿದ್ದಿ ಸಾಂಗತ್ಯ’.

Sneha Gowda

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

5 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

5 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

6 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

6 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

6 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

7 hours ago