‘ವೈಜ್ಞಾನಿಕ ಪ್ರಜ್ಞೆಯಿಂದ ನೈಸರ್ಗಿಕ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ’- ಡಾ. ಕುಮಾರ ಹೆಗ್ಡೆ ಬಿ.ಎ.

ಉಜಿರೆ, ಜೂ.6: ಪರಿಸರಕ್ಕೆ ಸಂಬಂಸಿದಂತೆ ಉಂಟಾಗುತ್ತಿರುವ ನೈಸರ್ಗಿಕ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಹೊಳೆಸುವ ಆಲೋಚನಾ ಕ್ರಮಗಳು ಭೌತಶಾಸ್ತ್ರ ಮತ್ತು ಜೀವವಿಜ್ಞಾನದ ಸಂಶೋಧನಾತ್ಮಕ ಪ್ರಜ್ಞೆಯಿಂದ ನಿರೂಪಿತವಾಗುತ್ತವೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ. ಅಭಿಪ್ರಾಯಪಟ್ಟರು.

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗ ಮತ್ತು ಫಿಜಿಕಾ ಸಂಘದ ಸಹಯೋಗದಲ್ಲಿ ‘ಇವೆಂಟ್ ಹಾರಿಜಾನ್’ ಶಿರ್ಷಿಕೆಯಡಿ ಸೋಮವಾರ ಆಯೋಜಿತವಾದ ಅಂತರ್ ಕಾಲೇಜು ಮಟ್ಟದ ಶೈಕ್ಷಣಿಕ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹವಾಮಾನ ಬದಲಾವಣೆ, ತಾಪಮಾನ ಏರಿಕೆಯಂತಹ ನೈಸರ್ಗಿಕ ಬಿಕ್ಕಟ್ಟುಗಳು ಹಲವು ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಭೌತಶಾಸ್ತ್ರ ಮತ್ತು ಜೀವವಿಜ್ಞಾನ ವಲಯಗಳೆರಡರ ಹೊಣೆಗಾರಿಕೆ ವಿಶೇಷವಾದದ್ದು. ಈ ವಲಯಗಳಲ್ಲಿ ನಡೆಯುವ ಹೊಸ ಆವಿಷ್ಕಾರ, ವ್ಯಕ್ತವಾಗುವ ಚಿಂತನೆ ಮತ್ತು ಹೊಳೆಯಲ್ಪಡುವ ಹೊಸ ಆಲೋಚನೆಗಳು ನೈಸರ್ಗಿಕ ಬಿಕಟ್ಟುಗಳಿಗೆ ಶಾಶ್ವತ ಪರಿಹಾರದ ದಾರಿ ತೋರಿಸುವಷ್ಟರ ಮಟ್ಟಿಗೆ ಸಶಕ್ತವಾಗಿವೆ ಎಂದರು.

ವಿಜ್ಞಾನ ಕ್ಷೇತ್ರಕ್ಕೆ ಭೌತಶಾಸ್ತ್ರವು ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗಳು ಜೀವಶಾಸ್ತçದ ಕೊಂಡಿಯಾದ ಭೌತಶಾಸ್ತ್ರಕ್ಕೆ ಬೆಸೆದುಕೊಂಡಿದೆ. ಇಂತಹ ವಿಷಯಗಳ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ನಡೆಸಬೇಕು, ಹೊಸ ಸಂಶೋಧನೆಗಳು ಹೆಚ್ಚಿನ ಜ್ಞಾನ ನೀಡುವುದರ ಜೊತೆಗೆ ಜಿಜ್ಞಾಸೆ ಮನೋಭಾವನೆಯನ್ನು ರೂಪಿಸುತ್ತವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಸ್ನಾತಕೋತ್ತ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ಮಾತನಾಡಿ ಪರಿಸರ ದಿನಾಚರಣೆಯ ಮಹತ್ವವನ್ನು ವಿಶ್ಲೇಷಿಸಿದರು. ಕೃತಕ ಬುದ್ದಿಮತ್ತೆ, ರೋಬೋಟ್ ಮತ್ತು ಉಪಗ್ರಹ ಉಡಾವಣೆ ಈ ವಿಷಯಗಳ ಸಂಬAಧಿಸಿದAತೆ ಅಧ್ಯಯನ ನಡೆಸುವವರಿಗೆ ಭೌತವಿಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಎಸ್ ಮಾತನಾಡಿದರು. ವಿಭಾಗ ಕೈಗೊಂಡ ಕಾರ್ಯಚಟುವಟಿಕೆಗಳು ಮತ್ತು ಹಿರಿಯ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಶಿಶೇಖರ್. ಎನ್. ಕಾಕತ್ಕರ್, ಸಹಾಯಕ ಪ್ರಾಧ್ಯಾಪಕ ಡಾ. ಹಾಲೇಶಪ್ಪ ಡಿ ಉಪಸ್ಥಿತರಿದ್ದರು. ದೀಪಾ, ಅಶ್ವಿನ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀವಿದ್ಯಾ ಪ್ರಾರ್ಥಿಸಿದರು. ಪರಿಕ್ಷೀತ್ ನಿರೂಪಿಸಿ, ಸಂಧ್ಯಾ ಬಿ.ಎಸ್. ವಂದಿಸಿದರು.

Gayathri SG

Recent Posts

ನಾನು ಇಸ್ಲಾಂ ಹಾಗೂ ಮುಸ್ಲಿಮರ ವಿರೋಧಿಯಲ್ಲ: ಪ್ರಧಾನಿ ಮೋದಿ

ನಾನು ಎಂದಿಗೂ ಇಸ್ಲಾಂ ಧರ್ಮ ಮತ್ತು ಮುಸ್ಲಿಂರನ್ನು ವಿರೋಧಿಸುವುದಿಲ್ಲ ಹೀಗಾಗಿ ಆ ಸಮುದಾಯದವರು ತಮ್ಮ ಹಕ್ಕು ಚಲಾಯಿಸುವಾಗ ತಮ ಭವಿಷ್ಯದ…

7 mins ago

ಮಂಗಳೂರು: ಹಿರಿಯ ನಿವಾಸಿಗಳಿಗೆ ಶ್ರವಣ ದೋಷ ನಿವಾರಕ ಯಂತ್ರೋಪಕರಣ ವಿತರಣೆ

ಲಿಟ್ಸ್ ಸಿಸ್ಟರ್ಸ್ ಆಫ್ ದಿ ಪೂವರ್ ಹಾಗೂ ಹೋಮ್ ಫಾರ್ ದಿ ಏಜೆಡ್ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ನಿವಾಸಿಗಳಿಗಾಗಿ “ಶ್ರವಣ…

28 mins ago

ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಪುಟಿನ್

ವ್ಲಾಡಿಮಿರ್ ಪುಟಿನ್ 5 ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು…

34 mins ago

ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಲ್ಕಿಯಲ್ಲಿ ಮತ ಚಲಾಯಿಸಿದರು.

38 mins ago

ಬಂಟ್ವಾಳ: ಹೋಟೆಲ್ ನಲ್ಲಿ ನೇಣು ಬಿಗಿದು ಅವಿವಾಹಿತ ಯುವಕ ಆತ್ಮಹತ್ಯೆ

ಬಿಸಿರೋಡಿನ ಹೆಸರಾಂತ ಹೋಟೆಲ್ ಒಂದರಲ್ಲಿ ತಂಗಿದ್ದ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ‌ಘಟನೆ ಇಂದು ನಡೆದಿದೆ.

49 mins ago

ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌; ಮೂವರು ಭಯೋತ್ಪಾದಕರು ಹತ

ಭದ್ರತಾ ಪದೇ ಹಾಗೂ ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಹತರಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ…

50 mins ago