News Karnataka Kannada
Saturday, April 27 2024
ಕ್ಯಾಂಪಸ್

ಉಜಿರೆಯ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಗುರುವಂದನೆ ಕಾರ್ಯಕ್ರಮ

Ratnamanasa: Guruvandana Program
Photo Credit : News Kannada

ಉಜಿರೆ: ಪ್ರೌಢಶಾಲಾ ಅಧ್ಯಯನದೊಟ್ಟಿಗೆ ಹಾಗೂ ಸಂಸ್ಕಾರಯುತ ಶಿಕ್ಷಣಾಧಾರಿತ ಜೀವನ ಶಿಕ್ಷಣಕ್ಕೆ ಪ್ರಸಿದ್ದಿಯಾಗಿರುವ ಉಜಿರೆಯ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚಿಗೆ ಗುರವಂದನಾ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ‍್ಷೆಗೆ ಶುಭಹಾರೈಸುವ ಕಾರ್ಯಕ್ರಮ ವಿಶಿ‍ಷ್ಟವಾಗಿ ಜರಗಿತು . ಆರಂಭದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರ ನಡುವಿನ ಬಾಂಧವ್ಯದ ಪ್ರತಿಕವಾಗಿ ಸಾಮೂಹಿಕ ಗೌರವಸಮರ್ಪಣೆ ಕಾರ್ಯಕ್ರಮ ನಡೆಯಿತು.

ಜೀವನದಲ್ಲಿ ಸಂಸ್ಕಾರದೊಂದಿಗೆ ಜವಾಬ್ದಾರಿಯುತ ಪ್ರಜೆಗಳಾಗಿ ಮುನ್ನಡೆಯತ್ತೇವೆಂಬ ಸಂಕಲ್ಪದೊಂದಿಗೆ ಹೆತ್ತವರ ಕಾಲಿಗೆ ನಮ್ಕರಿಸಿದರು.ನಂತರ ಪಾಲಕರು ವಿದ್ಯಾರ್ಥಿಗಳಿಗೆ ಗಂಧ ಪುಷ್ಪ ನೀಡಿ ಉಜ್ಜವಲ ಭವಿಷ್ಯಯಕ್ಕೆ ಶುಭಕೋರಿದರು. ವಿದ್ಯಾರ್ಥಿಗಳು ಇದೇವೇಳೆ ತಮ್ಮ ಶಿಕ್ಷಕ ವೃಂದವನ್ನು ಆರತಿ ಎತ್ತಿ ಗೌರವಸೂಚಿಸುವ ಮೂಲಕ ಗುರುಶಿಷ್ಯ ಪರಂಪರೆಗೆ ಮೆರಗು ನೀಡುವ ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಯಿತು.

ಗುರುವಂದನೆ ಕಾರ್ಯಕ್ರಮಕ್ಕೆ ಪೂರಕವಾಗಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್. ಸತೀಶ್ಚಂದ್ರ ಅವರು ಮಾತನಾಡಿ ವಿದ್ಯಾರ್ಥಿಯಲ್ಲಿ ಇರುವ ಸಾಮರ್ಥ್ಯವನ್ನು ಗುರುತಿಸಿ ಜೀವನದ ಪರೀಕ್ಷೆಯಲ್ಲಿ ಮುಂದೆತರುವದು ಶಿಕ್ಷಕರ ಜವಾಬ್ದಾರಿ ಇಂತಹ ಲೋಕ ಕಲ್ಯಾಣ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ನಾವು ಮರೆಯಬಾರದು ಎಂದು ಹೇಳಿದರು.
ನಮಗೆ ವಿದ್ಯೆಯನ್ನು ನೀಡಿ, ಸಮಾಜದಲ್ಲಿ ಸುಶಿಕ್ಷಿತನನ್ನಾಗಿ ಮಾಡುವ ಗುರುಗಳನ್ನು ನೆನೆಯುವುದೇ ಒಂದು ಪುಣ್ಯಕಾರ್ಯ ಶಿಸ್ತು ಮತ್ತು ಸಂಸ್ಕಾರಯುತ ಜೀವನ, ವಿದ್ಯಾಭಾಸದ ಜೊತೆಗೆ ಕ್ರಿಯಾಶೀಲ ಚಟುವಟಿಕೆಗಳಿಗೂ ರತ್ನಮಾನಸ ಅವಕಾಶವನ್ನು ಕೊಟ್ಟಿದ್ದು, ಗುರುವಿಗೆ ಕ್ಷಮಾಗುಣವೇ ಅಗತ್ಯ ಸಾಧನ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ರುಡ್ ಸೆಟ್’ನ ಕಾರ್ಯನಿರ್ವಾಹಕ ಅಧಿಕಾರಿ ಗಿರಿದರ್ ಅಭಿಪ್ರಾಯಪಟ್ಟರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಎಮ್. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗ್ಗಡೆ ಭಾರತೀಯ ಆಚರಣೆ ನಂಬಿಕೆಗಳಿಗೆ ವೈಜ್ಞಾನಿಕ ಕಾರಣಗಳಿದ್ದು ಅವುಗಳು ಇಂದು ಪಾಶ್ಯತ್ಯರಿಗೆ ಅರ್ಥವಾಗುತ್ತಿವೆ. ಅಂಕಗಳೇ ಜೀವನದ ಮೂಲ ಉದ್ದೇಶವಲ್ಲ ನಾವು ಪಡೆದುಕೊಂಡ ಸಂಸ್ಕಾರ ಮುಖ್ಯ. ಹತ್ತನೇಯ ತರಗತಿಯ ನಂತರದ ಆಯ್ಕೆ ಸ್ಪಷ್ಟವಾಗಿರಲಿ ಎಂದು ನುಡಿದರು.

ಪಾಲಕ ಗುರುರಾಜ್ ಬೆಂಗಳೂರು ಅವರು ರತ್ನಮಾನಸ ಸಂಸ್ಕಾರಯುತ ಶಿಕ್ಷಣವನ್ನು ಶ್ಲಾಘಿಸಿದರು ಶ್ರೀ. ಧ. ಮ. ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಸೋಮಶೇಖರ ಶೆಟ್ಟಿ,ಕಾಂಚನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ ಮಯ್ಯ , ಎಸ್.ಡಿ.ಎಂ ಸೆಕೆಂಡರಿ ಶಾಲೆಯ ಸಹ-ಶಿಕ್ಷಕ ಸುರೇಶ್ ಮಾತನಾಡಿ ಶುಭಹಾರೈಸಿದರು. ಸೆಕೆಂಡರಿ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದು.

ನಿಲಯ ಪಾಲಕ ಯತೀಶ್ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮವನ್ನು ಆರಂಭಿಸಿ, ಶಿಕ್ಷಕ ತ್ರಿಭುವನ ನಿರೂಪಿಸಿ ರವಿಚಂದ್ರ ಬಿ ಸ್ವಾಗತಿಸಿ ಉದಯ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು