News Karnataka Kannada
Thursday, May 02 2024
ಕ್ಯಾಂಪಸ್

ಪುತ್ತೂರು: ನಾಯಕನಾದವನು ವ್ಯವಸ್ಥೆಗೆ ಪೂರಕವಾಗಿ ಸ್ಪಂದಿಸಬೇಕು- ಸತ್ಯಪ್ರಸಾದ್ ಕೋಟೆ

A leader should respond to the system: Satyaprasad Kote
Photo Credit :

ಪುತ್ತೂರು: ಗುಣದ ಆಧಾರದ ಮೇಲೆ ನಾಯಕನ ಆಯ್ಕೆ ನಡೆಯಬೇಕು. ನಾಯಕತ್ವ ವಹಿಸಿಕೊಂಡವರು ಸಂಸ್ಥೆಯ ಉದ್ದೇಶ ಪ್ರಾಪ್ತಿಯಲ್ಲಿ ತಮ್ಮದಾದ ಕೊಡುಗೆಗಳನ್ನು ನೀಡಬೇಕು. ತನ್ಮೂಲಕ ಗುರಿ ಸಾಧನೆಗೆ ಸಹಕರಿಸಬೇಕು. ಆಗ ಮಾತ್ರ ವಿದ್ಯಾರ್ಥಿ ಸಂಘಕ್ಕೆ ಒಂದು ಅರ್ಥ ಬರುವುದಕ್ಕೆ ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಸತ್ಯಪ್ರಸಾದ್ ಕೋಟೆ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.  ಇಂದು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದನ್ನು ಶಾಸಕನಾದದ್ದಕ್ಕಿಂತ ವೈಭವದಲ್ಲಿ ಆಚರಿಸಿಕೊಳ್ಳುವುದನ್ನು ಕೆಲವು ಸಂಸ್ಥೆಗಳಲ್ಲಿ ಕಾಣಬಹುದು. ಆದರೆ ಈ ರೀತಿಯ ಗೌಜು ಗದ್ದಲಗಳು ಬೇಕೇ ಎಂಬುದನ್ನು ನಾವು ಯೋಚಿಸಬೇಕಿದೆ. ನಾಯಕನಾಗುವವನು ಇತರರಲ್ಲಿಯೂ ನಾಯಕತ್ವದ ಗುಣಗಳನ್ನು ತುಂಬುವ ವ್ಯಕ್ತಿಯಾಗಿರಬೇಕು. ಆಗ ಮಾತ್ರ ನಾಯಕತ್ವ ಉತ್ಕೃಷ್ಟ ಎನಿಸಿಕೊಳ್ಳಲು ಸಾಧ್ಯ. ವ್ಯವಸ್ಥೆಯನ್ನು ಸಲೀಸಾಗಿ ಮುಂದಕ್ಕೊಯ್ಯುವವನೇ ನಿಜವಾದ ನಾಯಕನೆನಿಸುತ್ತಾನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿ ನಾಯಕರು ಆಶ್ವಾಸನೆಗಳ ಮೂಲಕ ಗೆಲುವು ಕಾಣುವಂತಾಗಬಾರದು. ಬದಲಾಗಿ ಯೋಗ್ಯತೆಯ ಆಧಾರದಲ್ಲಿ ನಾಯಕತ್ವ ಒದಗಿ ಬರುವಂತಾಗಬೇಕು. ಶಾಂತ ರೀತಿಯ ಚುನಾವಣಾ ಪ್ರಕ್ರಿಯೆ ವಿದ್ಯಾಸಂಸ್ಥೆಗಳಲ್ಲಿ ನಡೆದಾಗ ಮಾತ್ರ ಅದು ಆದರ್ಶ ವ್ಯವಸ್ತೆ ಎನಿಸಿಕೊಳ್ಳುತ್ತದೆ. ಸರಳತೆ, ಪರಿಶ್ರಮ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತದೆ ಎಂದರು.

ಪುತ್ತೂರಿನ ಪಾಪ್ಯುಲರ್ ಸ್ವೀಟ್ಸ್ನ ಮಾಲಕ ನರಸಿಂಹ ಕಾಮತ್ ವಿದ್ಯಾರ್ಥಿ ಸಂಘವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನರಸಿಂಹ ಕಾಮತ್ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಜತೆಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಆಯ್ಕೆಗೊಂಡ ಸುಚಿತ್ರಾ ಪ್ರಭು ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಲಾಯಿತು. ವಿದ್ಯಾರ್ಥಿ ನಾಯಕರಿಗೆ ಬ್ಯಾಜ್ ವಿತರಿಸಲಾಯಿತು. ಅಂತೆಯೇ ಸಂಸ್ಥೆಯ ಧ್ವಜವನ್ನು ವಿದ್ಯಾರ್ಥಿ ಸಂಘಕ್ಕೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಸಂಸ್ಥೆಯ ಪ್ರಾಂಶುಪಾಲೆ ಸುಚಿತ್ರಾ ಪ್ರಭು, ಉಪಪ್ರಾಂಶುಪಾಲ ಗಣೇಶ್ ಪ್ರಸಾದ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರ್ಜುನ್ ಕೆ, ಕಾರ್ಯದರ್ಶಿ ಚಿದಂಬರ್, ವಿದ್ಯಾರ್ಥಿ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಗೋಪಿಕಾ ಎಚ್ ಭಟ್ ಸ್ವಾಗತಿಸಿ, ಪ್ರಾಚಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಅನುಜ್ಞಾ ಎಸ್.ಎಸ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿಯರಾದ ಕೃತಿ ಹಾಗೂ ಗೀತಾ ಸಿ.ಕೆ ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು