ತಾಂತ್ರಿಕ ಆವಿಷ್ಕಾರಗಳಿಗೆ ನಿಸರ್ಗವೇ ಸ್ಫೂರ್ತಿಶಕ್ತಿ: ಪೂರನ್ ವರ್ಮಾ

ಉಜಿರೆ, ಮೇ.23: ಪ್ರಕೃತಿಯ ವ್ಯಾಪ್ತಿಯಲ್ಲಿ ಲಭ್ಯವಿರುವ ಜೀವಸಂಕುಲ ಮತ್ತು ಭೌತಿಕ ಗುಣಲಕ್ಷಣಗಳ ಪ್ರೇರಣೆಯಿಂದ ಆಧುನಿಕ ತಂತ್ರಜ್ಞಾನದ ಮೌಲಿಕ ಮಾದರಿಗಳು ರೂಪುಗೊಂಡಿವೆ. ಇಂಥ ಆವಿಷ್ಕಾರಗಳ ಹಿಂದಿನ ಸ್ಫೂರ್ತಿದಾಯಕ ಅಂಶಗಳನ್ನು ಗಮನಿಸಿದಾಗ ಹೊಸದನ್ನು ಆಲೋಚಿಸುವ ಶಕ್ತಿ ಬರುತ್ತದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಸತಿ ನಿಲಯ ಮತ್ತು ಐಟಿ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರನ್ ವರ್ಮಾ ಅಭಿಪ್ರಾಯಪಟ್ಟರು.

ಎಸ್.ಡಿ.ಎಂ ಪದವಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗವು ಮಂಗಳವಾರ ‘ಜೀವ ವೈವಿಧ್ಯತೆ ಮತ್ತು ಭೌಗೋಳಿಕ ವ್ಯವಸ್ಥೆಯ ನಿರ್ವಹಣೆ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಂಪ್ಯೂಟರ್ ಸೇರಿದಂತೆ ಈಗಿನ ಎಲ್ಲಾ ಬಗೆಯ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯ ವ್ಯಾಪ್ತಿಯಲ್ಲಿ ಆವಿಷ್ಕೃತವಾದ ಎಲ್ಲಾ ಬಗೆಯ ಸಂಶೋಧನೆ ಮತ್ತು ತಾಂತ್ರಿಕ ಪರಿಕರಗಳ ಹಿಂದೆ ನಿಸರ್ಗದ ಪ್ರಭಾವ ಬಹಳಷ್ಟಿದೆ. ನಿಸರ್ಗದ ಒಳಗೇ ಲಭ್ಯವಿರುವ ಪ್ರಾಕೃತಿಕ ವಿನ್ಯಾಸಗಳು ಆಧುನಿಕ ತಾಂತ್ರಿಕತೆಯನ್ನು ರೂಪಿಸಿದ ಸ್ಫೂರ್ತಿದಾಯಕ ಅಂಶಗಳಾಗಿವೆ ಎಂದು ಹೇಳಿದರು.

ಪ್ರಕೃತಿಯಲ್ಲಿ ಮರಗಳ ಕಡೆಗೆ ಕಣ್ಣುಹಾಯಿಸಿದಾಗ ಸ್ಪೂರ್ತಿ ದೊರಕುತ್ತದೆ. ಸಸ್ಯಶಾಸ್ತ್ರವು ನಮ್ಮೊಳಗೆ ಹೊಸ ಶಕ್ತಿ ಮೂಡಿಸುತ್ತದೆ. ಬಯೋಮಿಮಿಕ್ರಿ ಎಂಬುದು ಹೊಸ ಪರಿಕಲ್ಪನೆ. ಇದರ ಪ್ರಕಾರ ಜಗತ್ತಿನಲ್ಲಿ ಇರುವಂಥ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ನಿಸರ್ಗದಲ್ಲಿಯೇ ಇದೆ. ನಿಸರ್ಗದಲ್ಲಿ ಲಭ್ಯವಾಗುವ ಪರಿಹಾರವನ್ನು ಗಮನಿಸಿ ಅಳವಡಿಸಿ ಪ್ರಯೋಗಿಸಿದಾಗ ವಿಶೇಷ ತಾಂತ್ರಿಕತೆ ರೂಪುಗೊಳ್ಳುತ್ತದೆ. ಇಂಥ ಪರಿಕಲ್ಪನೆಗಳ ಕುರಿತು ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರ ಹೆಗ್ಡೆ ಬಿ.ಎ ಅವರು ಮಾತನಾಡಿದರು. ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಡಾ.ಬಿ.ಯಶೋವರ್ಮ ಅವರು ಉಜಿರೆಯನ್ನು ಸಸ್ಯಕಾಶಿಯನ್ನಾಗಿಸುವ ಮಹತ್ವಾಕಾಂಕ್ಷಿ ಕನಸು ಕಂಡಿದ್ದರು. ಇಂಥ ಕನಸಿನ ಭಾಗವಾಗಿಯೇ 520ಕ್ಕೂ ಹೆಚ್ಚು ಸಸ್ಯಪ್ರಬೇಧಗಳನ್ನು ಒಳಗೊಂಡ ಆರ್ಬೋರೇಟಂ ಅನ್ನು ಸ್ಥಾಪಿಸಿದ್ದರು. ಇದು ಅಧ್ಯಯನಯೋಗ್ಯ ನೆಲೆಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅವರು ಡಾ.ಬಿ.ಯಶೋವರ್ಮ ಆದರ್ಶ ವ್ಯಕ್ತಿತ್ವದ ಭೌದ್ಧಿಕ ಮತ್ತು ಮಾನವೀಯ ಆಯಾಮಗಳನ್ನು ನೆನಪಿಸಿಕೊಂಡರು. ಸಸ್ಯಶಾಸ್ತ್ರಜ್ಞ ಶ್ರೀಧರ ಶೆಟ್ಟಿ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಸ್.ಶಿಶುಪಾಲ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಶಕುಂತಲಾ ಸ್ವಾಗತಿಸಿದರು. ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು.

Gayathri SG

Recent Posts

ನಾಳೆ ರಾತ್ರಿಯಿಂದ ಆಂಬ್ಯುಲೆನ್ಸ್ ಸೇವೆ ಬಂದ್: ಸಿಬ್ಬಂದಿಗಳಿಂದ ಮುಷ್ಕರ

108 ಆಂಬ್ಯುಲೆನ್ಸ್‌ ಸಿಬ್ಬಂದಿಗೆ ಮೂರು ತಿಂಗಳ ವೇತನ ಪಾವತಿಯಾಗದ ಕಾರಣಕ್ಕೆ ನಾಳೆ ಮೇ.6ರ ರಾತ್ರಿ 8 ಗಂಟೆಯಿಂದ ರಾಜ್ಯ ವ್ಯಾಪ್ತಿ…

2 mins ago

ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್ ಖಂಡಿಸಿ ಆರ್‌ಆರ್‌ಡಿ ವಕ್ತಾರ ರಾಜೀನಾಮೆ

ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣ ಎದುರಿಸುತ್ತಿದ್ದರೂ, ಅವರ ಪುತ್ರನಿಗೆ…

3 mins ago

“ಚೆಲ್ಲದಿರಿ ಅನ್ನ ಬಡವರಿಗದೇ ಚಿನ್ನ”; ಸ್ವಿಗ್ಗಿಯ ವೈರಲ್‌ ಪೋಸ್ಟ್​​​

ಅಗತ್ಯಕ್ಕಿಂತ ಹೆಚ್ಚು ಅನ್ನವನ್ನು ತೆಗೆದುಕೊಂಡು ನಂತರ ಅದನ್ನು ಬಿಸಾಡಬೇಡಿ, ಅನ್ನ ದೇವರಿಗೆ ಸಮಾನ ಎಂದು ಹೇಳಿದ್ರೂ ಕೂಡಾ, ಈ ಮಾತುಗಳಿಗೆ…

13 mins ago

ಗುರು ಗ್ರಂಥ ಸಾಹೀಬ್​ ಪುಟಗಳನ್ನು ಹರಿದ ಯುವಕ : ಹೊಡೆದು ಕೊಂದ ಸ್ಥಳೀಯರು

ಪಂಜಾಬ್‌ನ ಗುರುದ್ವಾರವೊಂದರಲ್ಲಿ ಪೂಜ್ಯ ಗುರು ಗ್ರಂಥ ಸಾಹಿಬ್‌ನ ಪುಟಗಳನ್ನು ಹರಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಹೊಡೆದು ಹತ್ಯೆ…

23 mins ago

ದುಷ್ಕರ್ಮಿಗಳಿಂದ ನಡುರಸ್ತೆಯಲ್ಲಿಯೇ ಸೀರೆಯಿಂದ ಕತ್ತು ಹಿಸುಕಿ ಗರ್ಭಿಣಿಯ ಹತ್ಯೆ

ನಡುರಸ್ತೆಯಲ್ಲಿಯೇ ಸೀರೆಯಿಂದ ಕತ್ತು ಹಿಸುಕಿ ಗರ್ಭಿಣಿಯ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ.

24 mins ago

ಬಿಜೆಪಿಗೆ ಮತ ಹಾಕ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಕ್ತಿಗೆ ಥಳಿತ

ಕಾಂಗ್ರೆಸ್​ಗೆ ಮತ ಹಾಕಲ್ಲ, ನಾವು ಬಿಜೆಪಿಗೆ ಮತ ಹಾಕುತ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ…

45 mins ago