ಮಂಗಳೂರು: ವಿವಿ ಕಾಲೇಜಿನಲ್ಲಿ ರೆಡ್ ಕ್ರಾಸ್ ಅಧಿಕಾರಿಗಳಿಗೆ ಎರಡು ದಿನಗಳ ಕಾರ್ಯಾಗಾರ

ಮಂಗಳೂರು: ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಮಾಜಮುಖಿಯಾಗಿ ಬದುಕಲು ಕಲಿಸುತ್ತವೆ, ಜೊತೆಗೆ ಜೀವನಕ್ಕೆ ಬೇಕಾಗುವ ಶಿಸ್ತು ರೂಢಿಸಿಕೊಳ್ಳಲು ಸಹಾಯಮಾಡುತ್ತವೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ ಕೆ ಅಭಿಪ್ರಾಯಪಟ್ಟರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಜಂಟಿಯಾಗಿ ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳಿಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರವನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲೇ ಮೊದಲ ಬಾರಿಕೆ ರೆಡ್ ಕ್ರಾಸ್ ಪಠ್ಯಕ್ರಮವನ್ನು ಮಂಗಳೂರು ವಿವಿ ಜಾರಿಗೆ ತರುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಿಸಲು ಕಾರ್ಯಾಗಾರ ಸಹಕಾರಿಯಾಗಲಿ, ಎಂದು ಆಶಿಸಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ ಮಾತನಾಡಿ, ಕರಾವಳಿ ಭಾಗದಲ್ಲಿ, ವಿಶೇಷವಾಗಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ರೆಡ್ಕ್ರಾಸ್ ಗೆ ಉತ್ತಮ ಬೆಂಬಲ ದೊರೆಯುತ್ತಿದೆ. ಇನ್ನು ಮುಂದೆ ಜಿಲ್ಲೆಯಿಂದ ವರ್ಷಕ್ಕೆ ಮೂವರು ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿಗಳನ್ನು ಗುರುತಿಸಿ ರಾಜ್ಯಪಾಲರ ಗೌರವ ದೊರೆಯುವಂತೆ ಮಾಡುವ ಉದ್ದೇಶವಿದೆ. ಅಲ್ಲದೆ ರಾಷ್ಟ್ರ, ರಾಜ್ಯಮಟ್ಟದ ಕ್ಯಾಂಪ್ಗಳನ್ನು ಜಿಲ್ಲೆಯಲ್ಲಿ ನಡೆಸುವ ಯೋಜನೆಯಿದೆ, ಎಂದರು.

ರಾಜ್ಯ ಪ್ರಶಸ್ತಿ ಪಡೆದ ಮಂಗಳೂರು ವಿವಿ ಯುವ ರೆಡ್ ಕ್ರಾಸ್ ಘಟಕವನ್ನು ಅಭಿನಂದಿಸಿದ ಎನ್ಎಸ್ಎಸ್ ಮತ್ತು ವೈಆರ್ಸಿ ನಿವೃತ್ತ ಸಲಹೆಗಾರ ಡಾ.ಹೆಚ್.ಎಸ್.ಸುರೇಶ್ ಮಾತನಾಡಿ, ಪ್ರಾಯೋಗಿಕ ಜ್ಞಾನ ಮನುಷ್ಯನಲ್ಲಿ ಉಳಿಯುತ್ತದೆ. ಸ್ವಪ್ರಯತ್ನದಿಂದ, ಅನುಭವಿಸಿ ಕಲಿಯುವುದು ನಿಜವಾದ ಶಿಕ್ಷಣ, ಎಂದರಲ್ಲದೆ, ರೆಡ್ ಕ್ರಾಸ್ಗೆ ಶೈಕ್ಷಣಿಕ ಸ್ಥಾನಮಾನ ನೀಡಿದ ಮಂಗಳೂರು ವಿವಿಯನ್ನು ಶ್ಲಾಘಿಸಿದರು.

ತಮ್ಮ ಆಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ.ಅನಸೂಯಾ ರೈ, ರೆಡ್ ಕ್ರಾಸ್ ಅನ್ನು ರಾಷ್ಟ್ರೀಯ ಶಿಕ್ಷಣ ಪದ್ಧತಿಯ (ಎನ್ಇಪಿ) ಕೌಶಲ್ಯ ವರ್ಧಕ ಕೋರ್ಸ್ಗಳಡಿ ಸೇರಿಸಿರುವುದು ಒಳ್ಳೆಯ ಬೆಳವಣಿಗೆ. ಕಳೆದ ಕೆಲವು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಡಿ ಯುವ ರೆಡ್ ಕ್ರಾಸ್ ನಡೆಸಿಕೊಂಡು ಬರುತ್ತಿರುವ ಚಟುವಟಿಕೆಗಳು ಅಭಿನಂದನೆಗೆ ಅರ್ಹ, ಎಂದರು.

ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಕುಸುಮಾಧರ್, ವೈಆರ್ಸಿ ಪಠ್ಯಕ್ರಮ ಸಮಿತಿ ಅಧ್ಯಕ್ಷ ಪ್ರಭಾಕರ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆನರಾ ಕಾಲೇಜಿನ ಯುವ ರೆಡ್ ಕ್ರಾಸ್ ಅಧಿಕಾರಿ ಸ್ಮಿತಾ ಎಂ ಕಾರ್ಯಕ್ರಮ ನಿರೂಪಿಸಿದರು.

ಬೆಸೆಂಟ್ ಮಹಿಳಾ ಕಾಲೇಜಿನ ದೀಕ್ಷಿತಾ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಪ್ರಗತಿ ಪ್ರಾರ್ಥನೆ ನೆರವೇರಿಸಿದರು.
ಎರಡು ದಿನಗಳ ಕಾರ್ಯಾಗಾರದಲ್ಲಿ ಡಾ. ಸುರೇಶ್ ಎಚ್ಎಸ್, ಮಿಥುನ್ ಭಟ್ ಕಾಕುಂಜೆ, ಡಾ. ಗಣನಾಥ ಎಕ್ಕಾರು, ಡಾ. ಗಣಪತಿ ಗೌಡ, ಡಾ. ಸಚ್ಚಿದಾನಂದ ರೈ, ದಿಲೀಪ್ ಸಿ ಎಸ್, ನಿತ್ಯಶ್ರೀ ಬಿವಿ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.

Ashika S

Recent Posts

ಆರ್‌ಸಿಬಿ vs ಸಿಎಸ್ಕೆ: ಚಾಲೆಂಜ್ ಹಾಕಿ ಖಾಕಿ ಅತಿಥಿಯಾದ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್

ಶನಿವಾರ ನಡೆದ ಹೈವೋಲ್ಟೇಜ್ ಆರ್‌ಸಿಬಿ ವರ್ಸಸ್ ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡುವುದಾಗಿ ವಿಡಿಯೋ ಪೋಸ್ಟ್…

13 mins ago

ಶೂ ವ್ಯಾಪಾರಿ ಮನೆಯಿಂದ 40 ಕೋಟಿ ರೂ. ನಗದು ವಶಕ್ಕೆ

ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಐಟಿ ಅಧಿಕಾರಿಗಳು ಆಗ್ರಾದಲ್ಲಿ ಶೂ ವ್ಯಾಪಾರಿ ರಾಮನಾಥ್‌ ಡಂಗ್‌…

16 mins ago

ಐಪಿಎಲ್‌ ಬೆಟ್ಟಿಂಗ್‌: ಲಕ್ಷ ಲಕ್ಷ ಹಣ ಕಳೆದುಕೊಂಡು ನೇಣಿಗೆ ಶರಣು

ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕನೊಬ್ಬ ಲಾಡ್ಜ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ…

40 mins ago

ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್‌ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

ಉಡುಪಿಯ ಪ್ರತಿಷ್ಠಿತ ಜವಳಿ ಮಳಿಗೆ ‘ಗೀತಾಂಜಲಿ ಸಿಲ್ಕ್’ ಮತ್ತು ಶಾಂತಿಸಾಗರ್ ಹೊಟೇಲ್‌ನ ಸಂಸ್ಥಾಪಕರಾದ ನೀರೆ ಬೈಲೂರು ಗೋವಿಂದ ನಾಯಕ್ (89)…

52 mins ago

ಸ್ಥಳೀಯ ವಾಹನಗಳಿಗೆ ಟೋಲ್ ಕಡಿತ: ಸ್ಥಳೀಯರಿಂದ ಸಾಸ್ತಾನ ಟೋಲ್ ಗೇಟ್ ಗೆ ಮುತ್ತಿಗೆ

ಕಳೆದ ಹಲವು ದಿನಗಳಿಂದ ಸ್ಥಳೀಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ನಲ್ಲಿ ಶುಲ್ಕ ಕಡಿತವಾಗುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಸಾಸ್ತಾನ ಟೋಲ್ ಗೇಟ್…

1 hour ago

ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ : ತುರ್ತು ಭೂ ಸ್ಪರ್ಶ

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಏರ್ ಇಂಡಿಯಾ ವಿಮಾನವು…

1 hour ago