ಮಂಗಳೂರು: ಯೆನೆಪೊಯ ಕಾಲೇಜಿನಲ್ಲಿ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ದಿನಾಚರಣೆ

ಮಂಗಳೂರು: ಅಂತರಾಷ್ಟ್ರೀಯ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ದಿನಾಚರಣೆ ಕಾರ್ಯಕ್ರಮವನ್ನು ಯೆನೆಪೊಯ ಡೆಂಟಲ್ ಕಾಲೇಜಿನ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದಲ್ಲಿ ಫೆಬ್ರವರಿ 13, 2023 ರಂದು ಹಮ್ಮಿಕೊಳ್ಳಲಾಗಿತ್ತು.

ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜಗದೀಶ್ ಚಂದ್ರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಿರಿಯ ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ.ಬಿ.ಎಚ್.ಶ್ರೀಪತಿ ರಾವ್ ಮತ್ತು ಮಾಜಿ ಪ್ರಾನ್ಸುಪಾಲ ಡಾ.ಅಕ್ತರ್ ಹುಸೇನ್ ಅವರನ್ನು ಸನ್ಮಾನಿಸಲಾಯಿತು.

ಡಾ.ಬಿ.ಎಚ್.ಶ್ರೀಪತಿ ರಾವ್ ಅವರು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಮತ್ತು ರಸ್ತೆ ಸಂಚಾರ ಅಪಘಾತಗಳಲ್ಲಿ ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಪಾತ್ರದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಅಕ್ತರ್ ಹುಸೇನ್, ಡಾ.ಶಾಮ್ ಎಸ್ ಭಟ್, ಡಾ.ಲಕ್ಷ್ಮೀಕಾಂತ್ ಚಾತ್ರ, ಡಾ.ಮಜಿ ಜೋಸ್, ಡಾ.ಜೋಯ್ಸ್ ಪಿ ಸಿಕ್ವೇರಾ ಉಪಸ್ಥಿತರಿದ್ದರು. ಛಾಯಾಚಿತ್ರ ಸ್ಪರ್ಧೆ, ವೀಡಿಯೋ ಗ್ರಾಫಿಕ್ ಸ್ಪರ್ಧೆ “ಜೀವಗಳನ್ನು ಉಳಿಸುವುದು, ಮುಖಗಳನ್ನು ಉಳಿಸುವುದು” ಎಂಬ ವಿಷಯದೊಂದಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ಧನ್ಯವಾದವನ್ನು ಡಾ.ವರ್ಷಾ ಉಪಾದ್ಯ ಪ್ರಸ್ತಾಪಿಸಿದರು.

Ashika S

Recent Posts

ಬ್ರಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಶುಶ್ರೂಷಕರ ದಿನಾಚರಣೆ

ಇಲ್ಲಿನ ಬ್ರಿಮ್ಸ್ ಆವರಣದಲ್ಲಿರುವ ಬ್ರಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ವಿಶ್ವ ಶುಶ್ರೂಷಕರ ದಿನ ಆಚರಿಸಲಾಯಿತು.

5 mins ago

ಮುಂಬೈನಲ್ಲಿ ಹೋರ್ಡಿಂಗ್ ಬಿದ್ದು ಮೂವರು ಸಾವು: 59 ಜನರಿಗೆ ಗಾಯ

ಮುಂಬೈನಲ್ಲಿ ಈ ವರ್ಷದ ಮೊದಲ ಮಳೆಗೆ ಅನಾಹುತ ಸಂಭವಿಸಿದೆ. ಇಂದು ಸಂಜೆ 4.30ರ ಸುಮಾರಿಗೆ ಹೋರ್ಡಿಂಗ್ ಕುಸಿದಿದ್ದರಿಂದ ಸುಮಾರು 100…

25 mins ago

ಸಚಿವ ಹೆಚ್‌.ಡಿ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

47 mins ago

ಕಳ್ಳತನವಾಗಿದ್ದ 52 ಮೊಬೈಲ್ ಗಳನ್ನು ಪತ್ತೆ ಮಾಡಿದ ಜಿಲ್ಲಾ ಪೊಲೀಸ್

ಇ- ಲಾಸ್ಟ್ ಮತ್ತು ಸಿಇಐಆರ್- ಫೋರ್ಟಲ್ ಮೂಲಕ ಕಳೆದು ಹೋಗಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ 52 ಮೊಬೈಲ್‌ಗಳನ್ನು…

59 mins ago

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ಅಂಬಿಕಾ ವಿದ್ಯಾಲಯದ ಸಾಧನೆ: ನೂರು ಶೇಕಡಾ ಫಲಿತಾಂಶ

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು 2023 – 24ನೇ ಸಾಲಿನ…

1 hour ago

ನಾಡ ಜನರ ಬದುಕು ನಂದಾದೀಪವಾಗಲು ನಂದಿ ಬಸವೇಶ್ವರ ತೊಟ್ಟಿಲು ತೂಗಿದ ಗಡಿನಾಡ ನಾರಿಯರು

ಕರ್ನಾಟಕದ ಕಟ್ಟಕಡೆಯ ಗ್ರಾಮವಾದ ಗಡಿನಾಡ ಗ್ರಾಮ ಬಳೂರ್ಗಿ ಗ್ರಾಮ ದೇವ ನಂದಿ ಬಸವೇಶ್ವರರ ತೊಟ್ಟಿಲು ತೂಗುವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.…

2 hours ago