ಮಂಗಳೂರು: ಎ.1ರಂದು ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್‌ಟ್ಯೂಷನ್ಸ್‌ನ ಪದವಿ ಪ್ರದಾನ ಕಾರ್ಯಕ್ರಮ

ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್‌ಟ್ಯೂಷನ್ಸ್‌ನ ವಿವಿಧ ಸಂಸ್ಥೆಗಳ ಪದವಿ ಪ್ರದಾನ ಕಾರ್ಯಕ್ರಮವು ಮಾರ್ಚ್ ೩೧ ಮತ್ತು ಎಪ್ರಿಲ್ ೧ರಂದು ಮಧ್ಯಾಹ್ನ ೨.೩೦ಕ್ಕೆ ನಗರದ ಫಾದರ್ ಮುಲ್ಲರ್ ಕನ್ವೆಶ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ| ಆಂಟೋನಿ ಸಿಲ್ವಾನ್ ಡಿಸೋಜಾ ಹೇಳಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,. ಮಾರ್ಚ್ ೩೧ರ ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಾಧ್ಯಕ್ಷರಾದ ಹಾಗೂ ಸಂಸ್ಥೆ ಅಧ್ಯಕ್ಷರಾದ ವಂದನೀಯ ಡಾ| ಪೀಟರ್ ಪೌಲ್ ಸಲ್ಡಾನಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜೀವ್ ಗಾಂಧಿ ಯುನಿರ್ವಸಿಟಿ ಹೆಲ್ತ್ ಸೈನ್ಸ್‌ನನ ಉಪಕುಲಪತಿಗಳಾದ ಡಾ|ಎಂ.ಕೆ. ರಮೇಶ್ , ಮಲೇಶಿಷಿಯಾ ಸಬಾ ಹೆಲ್ತ್ ಕೇರ್‌ನ ಅಧಿಕಾರಿ ಡಾ|ಹೆರಿಕ್ ಕೊರೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು, ಎಪ್ರಿಲ್ ೧ರ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ನರ್ಸ್ ರಿಜಿಸ್ಟರ್ ಪ್ರೋ. ಪ್ರಸನ್ನ ಕುಮಾರ್ ಭಾಗವಹಿಸಲಿದ್ದಾರೆ. ಈ ವೇಳೆ ತರಬೇತಿ ಪಡೆದ ದಾದಿಯರ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಪ್ರೋ.ಡಾ.ರಾಯ್.ಕೆ.ಜಾರ್ಜ್, ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಉಪಾಧ್ಯಕ್ಷರಾದ ರೇ.ಎಂಎಸ್‌ಜಿಆರ್ ಮ್ಯಾಕ್ಸಿಮ್ ಎಲ್.ನೊರೊನ್ಹಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಂಸ್ಥೆಯ ನಿರ್ದೇಶಕರಾದ ರೇ.ಫಾದರ್ ರಿಚರ್ಡ್ ಅಲೋಶಿಯಸ್ ಕೊಯೊಲೋ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ೧೫೭ ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳು, ೭೩ ಎಮ್‌ಡಿ ಮತ್ತು ಎಂಎಸ್ ವಿಭಾಗದ ವಿದ್ಯಾರ್ಥಿಗಳಿಗೆ , ಪಿಸಿಥೋಥೆರಾಫಿ ೪೦ಮತ್ತು ಮಾಸ್ಟರ್ ಆಫ್ ಪಿಸಿಯೋಥೆರಾಫಿ೯ ಮಂದಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಫಾದರ್ ಮುಲ್ಲರ್ ಸೂಲ್ಕ್ ಆಪ್ ನರ್ಸಿಂಗ್ ಮತ್ತು ಪಾದರ್ ಮುಲ್ಲರ್ ಕಾಲೇಜು ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ರೇ.ಸಿಸ್ಟರ್ ಜೆಸಿಂತಾ ಡಿಸೋಜಾ ಮಾತನಾಡಿ, ಫಾದರ್ ಮುಲ್ಲರ್ ಸೂಲ್ಕ್ ಆಪ್ ನರ್ಸಿಂಗ್ ಮತ್ತು ಪಾದರ್ ಮುಲ್ಲರ್ ಕಾಲೇಜು ಆಫ್ ನರ್ಸಿಂಗ್ ಒಟ್ಟು ೧೬೯ ಮಂದಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಜಿಎನ್‌ಎಂ ೩೭, ಬಿಎಸ್ಸಿ ೯೯,ಪಿಬಿ ಬಿಎಸ್ಸಿ ೨೬, ಎಂಎಸ್ಸಿ ನರ್ಸಿಂಗ್ ೭ ಮಂದಿ ಪದವಿ ಪ್ರದಾನ ನೆರವೇರಲಿದೆ. ವಿಶ್ವವಿದ್ಯಾನಿಲಯ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಾದ ೨೬ ಮಂದಿ ಗೌರವಿಸಲಾಗುತ್ತಿದೆ ಎಂದು ಅವರು ಹೇಳಿದು.

ಇನ್ನು ಫಾದರ್ ಮುಲ್ಲರ್ ಕಾಲೇಜು ಆಫ್ ಆಲ್ಫೈಡ್ ಹೆಲ್ತ್ ಸೈನ್ಸ್‌ನ ಪ್ರಾಂಶುಪಾಲರಾದ ಡಾ|ಹಿಲ್ಡಾ ಡಿಸೋಜಾ ಮಾತನಾಡಿ, ಫಾದರ್ ಮುಲ್ಲರ್ ಮೆಡಿಕಲ್‌ಕಾಲೇಜು ,ಫಾದರ್ ಮುಲ್ಲರ್ ಕಾಲೇಜು ಆಫ್ ಆಲ್ಫೈಡ್ ಹೆಲ್ತ್ ಸೈನ್ಸ್, ಫಾದರ್ ಮುಲ್ಲರ್ ಕಾಲೇಜು ಸ್ಪೀಚ್ ಆಫ್ ಹಿರಯರಿಂಗ್‌ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಎಂಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಾಜಿ ೮, ಮಾಸ್ಟರ್ ಇನ್ ಹಾಸ್ಟಿಲ್ ಆಡ್ಮಿಸ್ಟೆಟರ್ ೨೧, ಎಂ.ಸಿಎಚ್ ಯೂರೋಲಾಜಿ ೦೧, ಬಿಎಸ್ಸಿ ಮೆಡಿಕಲ್ ಇಮ್ಯಾಜಿಂಗ್ ಟೆಕ್ನೋಲಜಿ ೨೦, ಬಿಎಸ್ಸಿ ರೇಡಿಯೋಥೆರಪಿ ೨, ಬಿಎಸ್ಸಿ ಅನಸ್ತೇಶಿಯಾ ಟೆಕ್ನಾಲಜಿ ೧೨, ಬಿ ಎಸ್ಸಿ ಅಫರೇಶನ್ ಥಿಯೇಟರ್ ಟೆಕ್ ೦೩, ಬಿಎಸ್ಸಿ ರೀನಲ್ ಡೈಯಾಲಿಸೀಸ್ ಟೆಕ್ನೀಶಿಯನ್ ೦೫, ಒಟ್ಟು ೧೦೦ ಮಂದಿಗೆ ಗಣ್ಯರು ಪದವಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದ್ರು. ಸುದ್ದಿಗೋಷ್ಠಿಯಲ್ಲಿ ಲೈಝನರ್ ಆಫೀಸರ್ ಡಾ| ಕೆಲ್ವಿನ್ ಪಾಯಸ್ ಉಪಸ್ಥಿತರಿದ್ದರು.

Ashika S

Recent Posts

ಹಾಸನ ವಿಡಿಯೋ ಪ್ರಕರಣ: ಸುಳ್ಳು ದೂರಿನ ಒತ್ತಡ

ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದಾರೆ. ಶಾಸಕ ರೇವಣ್ಣ ಜೈಲು ಶಿಕ್ಷೆಗೆ ಗುರಿಗಾಗಿದ್ದಾರೆ. ಈ…

2 mins ago

ಮದುವೆ ರದ್ದು, ಕೋಪದಿಂದ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರೇಮಿ

ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿಯಲ್ಲಿ ನಡೆದಿದೆ.

18 mins ago

ಅಕ್ಷಯ ತೃತೀಯದಂದು ಲಕ್ಷ್ಮಿ ಮತ್ತು ಕುಬೇರನಿಗೆ ವಿಶೇಷ ಪೂಜೆ

ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ,…

43 mins ago

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

1 hour ago

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

9 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

9 hours ago