ಮಿಲಾಗ್ರಿಸ್ ಕಾಲೇಜ್‌ ನಲ್ಲಿ ‘ಕೊಂಕಣಿ ಜಾನಪದ ಮತ್ತು ಭವಿಷ್ಯ’ ವಿಷಯದ ಕುರಿತು ವಿಚಾರ ಸಂಕಿರಣ

ಮಂಗಳೂರು: ಇಂದು (ಮಾರ್ಚ್ 26) ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠ ಮತ್ತು ಮಿಲಾಗ್ರಿಸ್ ಕಾಲೇಜು ಮಂಗಳೂರು ವತಿಯಿಂದ ‘ಕೊಂಕಣಿ ಜಾನಪದ ಮತ್ತು ಭವಿಷ್ಯ’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ವನ್ನು ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಗೌರವಾನ್ವಿತ ಉಪಕುಲಪತಿಗಳಾದ ಡಾ.ಪಿ.ಎಲ್.ಧರ್ಮ ಅವರು ಕಾರ್ಯಕ್ರಮದ ಉದ್ಘಾಟಕರಾಗಿ ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ತಮ್ಮ ಭಾಷಣ ದಲ್ಲಿ ” “ಮೌಖಿಕ ಪರಂಪರೆಯ ವಾಹಕ ಜನಪದ ಸಂಸ್ಕೃತಿ “: ಕೊಂಕಣಿ ಭಾಷೆ ಬಾಂದವ್ಯ ಬೆಸೆಯುವ ಕಲೆಯನ್ನು ಹೊಂದಿರುವ ಭಾಷೆಯಾಗಿದ್ದು, ಕೊಂಕಣಿ ಅಕಾಡೆಮಿಯು ಸಮಸ್ತ ಕೊಂಕಣಿ ಭಾಂದವರಿಗೆ ಕೊಂಕಣಿ ಭಾಷಾಭಿವೃದ್ದಿಗಾಗಿ ಅವಕಾಶಗಳನ್ನು ಕಲ್ಪಿಸುತ್ತಿದೆ ಹಾಗೂ ಕೊಂಕಣಿ ನಮ್ಮ ಮೂಲಭಾಷೆ, ಕೊಂಕಣಿ ಭಾಷಿಕರು ಮನೆಯಲ್ಲಿರುವ ಮಕ್ಕಳಿಗೆ ಕೊಂಕಣಿ ಬಗ್ಗೆ ಅಭಿರುಚಿ ಬೆಳೆಸಿದಾಗ ಮಾತ್ರ ಕೊಂಕಣಿ ಭಾಷೆ ಬೆಳೆಯಲು ಸಾಧ್ಯ” ಎಂದು ಮಾಹಿತಿ ನೀಡಿದರು.

ಕಾಲೇಜಿನ ಸಂಚಾಲಕ ರೆ| ಫಾ| ಬೊನವೆಂಚರ್ ನಝರತ್ ಅಧ್ಯಕ್ಷತೆ ವಹಿಸಿ ಮಾತನಾಡಿ “ಜನಪದ ಸಂಸ್ಕೃತಿ ಜಾತಿ, ಧರ್ಮ, ಪಂಥ ಇವುಗಳನ್ನು ಬೆಸೆಯುತ್ತದೆ . ಈ ಜನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ” ಎಂದು ಹೇಳಿದರು.

ಕ್ಯಾಥೋಲಿಕ್ ಬೋರ್ಡ್ ನ ನಿಯೋಜಿತ ಕಾರ್ಯದರ್ಶಿ ವಂ ಡಾ ಲಿಯೋ ಲಾಸ್ರದೋ , ವಿದ್ಯಾರ್ಥಿ ಪ್ರತಿನಿಧಿ ಆನ್ಸನ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ ಜಯವಂತ ನಾಯಕ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

ಮುಂಬೈ ಜಾನಪದ ಕಾರ್ಯಕರ್ತ ಶ್ರೀಯುತ ವಿಲ್ಸನ್ ಪಿಂಟೋ, ವಿಚಾರ ಸಂಕಿರಣದ ಪ್ರಧಾನ ಭಾಷಣಕಾರರಾಗಿ ಆಗಮಿಸಿದರು.
ತಾಂತ್ರಿಕ ಅಧಿವೇಶನದಲ್ಲಿ, ಕುಲಶೇಖರ್ ನ ಶ್ರೀಮತಿ ಐರಿನ್ ರೆಬೆಲ್ಲೋ, ಇವರು “ಕೊಂಕಣಿ ಕ್ರಿಶ್ಚಿಯನ್ ಜಾನಪದ ಮತ್ತು ಭವಿಷ್ಯ”, ಮಂಗಳೂರಿನ ಶ್ರೀಯುತ ಬಿಂದುಮಾಧವ ಶೆಣೈ, “ಕೊಂಕಣಿ ಜಿ. ಎಸ್ ಬಿ. ಜಾನಪದ ಮತ್ತು ಭವಿಷ್ಯ” ಪ್ಯಾನಲಿಸ್ಟ್ ರಾಗಿ ಮೂಡಬಿದ್ರಿ ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ,ಪ್ರಾಂಶುಪಾಲರಾದ ಡಾ ರೋಶನ್ ಪಿಂಟೋ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ರೆ| ಫಾ| ಮೈಕೆಲ್, ಸಾಂತುಮಯೋರ್ ಸ್ವಾಗತಿದರು. ಸಂಯೋಜಕಿ ಕು. ಟ್ರೆಸ್ಸಿ ಪಿಂಟೋ ವಂದಿಸಿದರು . ಹಿಂದಿ ವಿಭಾಗದ ಸಹಾಯಕ ಪ್ರಾದ್ಯಾಪಕಿ ಕು ಶ್ರಾವ್ಯ ಎನ್ ಕಾರ್ಯಕ್ರಮ ನಿರೂಪಿಸಿದರು.

 

Ashitha S

Recent Posts

ಎಸ್​ಎಸ್​ಎಲ್​​​ಸಿ ಫಲಿತಾಂಶ; ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಬೆಳ್ತಂಗಡಿ ವಿದ್ಯಾರ್ಥಿ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು…

4 mins ago

ರೇವಣ್ಣ ಲೈಂಗಿಕ ಹಗರಣ: ಮಹಿಳಾ ಕಾಂಗ್ರೆಸ್ ನಿಂದ ಪೊರಕೆ ಹಿಡಿದು ಪ್ರತಿಭಟನೆ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್…

11 mins ago

ಎಸ್ಎಸ್​ಎಲ್​ಸಿ ಫಲಿತಾಂಶ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

24 mins ago

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ : ಇಬ್ಬರು ಮಹಿಳೆಯರಿಗೆ ಗಾಯ

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ…

27 mins ago

ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ : ಡೆತ್‌ನೋಟು ಪತ್ತೆ

ತನ್ನ ಮಕ್ಕಳಿಬ್ಬರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸಾವಿಗೆ ಮುನ್ನ ವಿಡಿಯೊ ಮೆಸೇಜ್‌ ಮಾಡಿರುವ ಮಹಿಳೆ, ಪತಿಯ ಕಿರುಕುಳದಿಂದ…

38 mins ago

ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ; ಇಲ್ಲಿ ಫಲಿತಾಂಶ ವೀಕ್ಷಿಸಿ

2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಂಡಿದೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ…

45 mins ago